ADVERTISEMENT

ಲಾಕ್‌ಡೌನ್ ಪರಿಣಾಮ: ಕಚ್ಚಾ ತೈಲ ಆಮದು ಇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 11:34 IST
Last Updated 20 ಜೂನ್ 2020, 11:34 IST
ಕಚ್ಚಾ ತೈಲ-ಪ್ರಾತಿನಿಧಿಕ ಚಿತ್ರ
ಕಚ್ಚಾ ತೈಲ-ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದ ಕಚ್ಚಾ ತೈಲ ಆಮದು 2005ರ ಬಳಿಕ ಇದೇ ಮೊದಲ ಬಾರಿಗೆ ಮೇನಲ್ಲಿ ಶೇ 22.6ರಷ್ಟು ಇಳಿಕೆ ಕಂಡಿದೆ.

ಕೊರೊನಾ ಹರಡುವಿಕೆ ನಿಯಂತ್ರಿಸಲು ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಇಂಧನ ಬೇಡಿಕೆ ತಗ್ಗಿದ್ದು, ಸಂಸ್ಕರಣೆಯನ್ನು ಕಡಿಮೆ ಮಾಡಲಾಗಿದೆ. ಇದರಿಂದಾಗಿ ಆಮದು ಇಳಿಕೆಯಾಗಿದೆ.

ಮೇನಲ್ಲಿ ಕಚ್ಚಾತೈಲ ಆಮದು 1.46 ಕೋಟಿ ಟನ್‌ಗಳಷ್ಟಾಗಿದೆ ಎಂದು ಪೆಟ್ರೋಲಿಯಂ ಪ್ಲಾನಿಂಗ್ ಆ್ಯಂಡ್‌ ಅನಲಿಸಿಸ್‌ ಸೆಲ್‌ನಲ್ಲಿ‌ (ಪಿಪಿಎಸಿ) ಮಾಹಿತಿಇದೆ.

ADVERTISEMENT

ತೈಲ ಉತ್ಪನ್ನಗಳ ಆಮದು ಶೇ 0.8ರಷ್ಟು ಕಡಿಮೆಯಾಗಿದ್ದು, 35.7 ಲಕ್ಷ ಟನ್‌ಗಳಿಗೆ ತಲುಪಿದೆ. ರಫ್ತು ಸತತ 9ನೇ ತಿಂಗಳಿನಲ್ಲಿಯೂ ಏರಿಕೆ ಕಂಡಿದ್ದು, ಮೇನಲ್ಲಿ ಶೇ 5.9ರಷ್ಟು ಹೆಚ್ಚಾಗಿದ್ದು, 57.5 ಲಕ್ಷ ಟನ್‌ಗಳಷ್ಟಾಗಿದೆ.

ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಲು ಆರಂಭಿಸಿದ್ದು, ಇದರಿಂದ ಇಂಧನ ಬೇಡಿಕೆ ಹೆಚ್ಚಾಗಲಿದ್ದು, ಸಂಸ್ಕರಣೆಯೂ ಹೆಚ್ಚಾಗುವ ನಿರೀಕ್ಷೆ ಮಾಡಲಾಗುತ್ತಿದೆ.ಮೇನಲ್ಲಿ ತೈಲ ಬೇಡಿಕೆಯು ಶೇ 50ರಷ್ಟು ಹೆಚ್ಚಾಗಿದ್ದು, ಆರ್ಥಿಕತೆ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿರುವ ಸೂಚನೆ ನೀಡಿದೆ.

ಏಪ್ರಿಲ್‌ ತಿಂಗಳಿಗೆ ಕಚ್ಚಾ ತೈಲ ಆಮದು ಪ್ರಮಾಣವನ್ನು ಪರಿಷ್ಕರಿಸಲಾಗಿದೆ. 1.72 ಕೋಟಿ ಟನ್‌ ಆಮದಾಗುವ ಅಂದಾಜು ಮಾಡಲಾಗಿತ್ತು. ಆದರೆ 1.65 ಕೋಟಿ ಟನ್‌ಗಳಷ್ಟಾಗಿದೆ.

ಆಮದು ವಿವರ (ಕೋಟಿ ಟನ್‌)

2015-16;20.28

2016-17;21.39

2017–18; 22.04

2018–19;22.64

2019–20;22.69 (ಅಂದಾಜು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.