ADVERTISEMENT

ಭಾರತದ ಆರ್ಥಿಕತೆಯ ಗಾತ್ರ ಇದೀಗ 4 ಟ್ರಿಲಿಯನ್ ಯುಎಸ್‌ಡಿ: ನೀತಿ ಆಯೋಗದ ಸಿಇಒ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2025, 11:25 IST
Last Updated 25 ಮೇ 2025, 11:25 IST
   

ನವದೆಹಲಿ: ಜಪಾನ್‌ ಅನ್ನು ಹಿಂದಿಕ್ಕಿ ಭಾರತ ಜಗತ್ತಿನಲ್ಲಿಯೇ ಇದೀಗ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್‌ ಸುಬ್ರಮಣ್ಯಂ ಅವರು ಹೇಳಿದ್ದಾರೆ.

ಭಾನುವಾರ ನಡೆದ ನೀತಿ ಆಯೋಗದ ಗವರ್ನಿಂಗ್ ಕೌನ್ಸಿಲ್‌ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಅಂಕಿಅಂಶಗಳನ್ನು ಉಲ್ಲೇಖಿಸಿ ಭಾರತ ಇದೀಗ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಭಾರತದ ಆರ್ಥಿಕತೆಯ ಗಾತ್ರ ನಾಲ್ಕು ಟ್ರಿಲಿಯನ್ ಯುಎಸ್ ಡಾಲರ್ ಆಗಿದೆ ಎಂದು ಬಿವಿಆರ್‌ ಸುಬ್ರಮಣ್ಯಂ ಹೇಳಿದರು.

ADVERTISEMENT

ಅಮೆರಿಕ, ಚೀನಾ, ಜರ್ಮನಿಯ ನಂತರ ನಾವೇ ಇದ್ದೇವೆ. ಜಪಾನ್‌ ಅನ್ನು ಹಿಂದಿಕ್ಕಿ ಭಾರತದ ಆರ್ಥಿಕತೆ ಬೆಳೆಯುತ್ತಿದೆ. ದೇಶದ ಆರ್ಥಿಕತೆಯ ಸದ್ಯದ ವಾತಾವರಣ ಎಲ್ಲರೀತಿಯಿಂದಲೂ ಭಾರತದ ಅಭಿವೃದ್ಧಿಗೆ ಅನುಗುಣವಾಗಿದೆ ಎಂದು ಹೇಳಿದರು.

ಇನ್ನೂ ಎರಡೂವರೆ ಅಥವಾ ಮೂರು ವರ್ಷದಲ್ಲಿ ನಾವು ಜರ್ಮನಿಯನ್ನು ಹಿಂದಕ್ಕೆ ತಳ್ಳಿ ಮೂರನೇ ಸ್ಥಾನದಲ್ಲಿ ಇರಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.