ಮುಂಬೈ: ಜೂನ್ ಅಂತ್ಯದ ವೇಳೆಗೆ ಭಾರತವು ವಿದೇಶಗಳಿಂದ ಪಡೆದ ಸಾಲಗಳ ಮೊತ್ತವು 747.2 ಬಿಲಿಯನ್ ಅಮೆರಿಕನ್ ಡಾಲರ್‌ಗೆ (ಅಂದಾಜು ₹66.36 ಲಕ್ಷ ಕೋಟಿ) ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.
2025ರ ಮಾರ್ಚ್ ಅಂತ್ಯಕ್ಕೆ ಭಾರತವು ವಿವಿಧ ದೇಶಗಳಿಂದ ಪಡೆದಿದ್ದ ಸಾಲದ ಮೊತ್ತಕ್ಕೆ ಹೋಲಿಸಿದರೆ ಇದು 11.2 ಬಿಲಿಯನ್ ಡಾಲರ್‌ನಷ್ಟು (ಅಂದಾಜು ₹99 ಸಾವಿರ ಕೋಟಿ) ಹೆಚ್ಚು.
ಆದರೆ ದೇಶದ ಸಾಲವನ್ನು ದೇಶದ ಒಟ್ಟು ಜಿಡಿಪಿಯ ಗಾತ್ರದ ಜೊತೆ ಹೋಲಿಸಿದರೆ ಸಾಲದ ಪ್ರಮಾಣವು ಕಡಿಮೆ ಆಗಿರುವುದು ಕಾಣುತ್ತದೆ. ಜೂನ್ ಅಂತ್ಯಕ್ಕೆ ವಿದೇಶಿ ಸಾಲ ಮತ್ತು ಜಿಡಿಪಿ ಅನುಪಾತವು ಶೇ 18.9ಕ್ಕೆ ಇಳಿಕೆ ಆಗಿದೆ. ಇದು ಮಾರ್ಚ್‌ನಲ್ಲಿ ಶೇ 19.1ರಷ್ಟು ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.