
ಪ್ರಜಾವಾಣಿ ವಾರ್ತೆ
ಎಸ್‌ಬಿಐ
ನವದೆಹಲಿ: ಜಿಎಸ್‌ಟಿ ಇಳಿಕೆಯಿಂದ ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.5 ಅಥವಾ ಅದಕ್ಕಿಂತ ಹೆಚ್ಚು ದಾಖಲಾಗುವ ನಿರೀಕ್ಷೆ ಇದೆ ಎಂದು ಎಸ್‌ಬಿಐ ರಿಸರ್ಚ್ ವರದಿ ಮಂಗಳವಾರ ತಿಳಿಸಿದೆ.
ಜಿಎಸ್‌ಟಿ ದರ ಕಡಿತದಿಂದ ಹಬ್ಬದ ಮಾರಾಟದಲ್ಲಿ ಏರಿಕೆಯಾಗಿದೆ. ದೇಶದಲ್ಲಿ ಹೂಡಿಕೆ ಚಟುವಟಿಕೆ ಹೆಚ್ಚಳವಾಗಿದೆ. ಸೇವೆಗಳು ಮತ್ತು ತಯಾರಿಕಾ ವಲಯದಲ್ಲಿ ಖರೀದಿ ಪ್ರಮಾಣ ಹೆಚ್ಚಳವಾಗಿದೆ. ಇದು ಜಿಡಿಪಿ ಹೆಚ್ಚಳವಾಗಲು ನೆರವಾಗಲಿದೆ ಎಂದು ಹೇಳಿದೆ.
ಜೂನ್ ತ್ರೈಮಾಸಿಕದಲ್ಲಿ ಕೃಷಿ, ಕೈಗಾರಿಕೆ, ಸೇವಾ ವಲಯದಲ್ಲಿ ಬಳಕೆ ಮತ್ತು ಬೇಡಿಕೆ ಶೇ 70ರಷ್ಟಿತ್ತು. ಅದು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 83ಕ್ಕೆ ಏರಿಕೆಯಾಗಿದೆ. ಹೀಗಾಗಿ ಜಿಡಿಪಿ ಹೆಚ್ಚಳವಾಗುವ ಅಂದಾಜಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.