ADVERTISEMENT

ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿ ಶೇ 18.5ರಷ್ಟು ಬೆಳವಣಿಗೆ: ಎಸ್‌ಬಿಐ

ಪಿಟಿಐ
Published 24 ಆಗಸ್ಟ್ 2021, 11:09 IST
Last Updated 24 ಆಗಸ್ಟ್ 2021, 11:09 IST

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಶೇಕಡ 18.5ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ಹೇಳಿದೆ.

ಎಸ್‌ಬಿಐನ ಅರ್ಥಶಾಸ್ತ್ರಜ್ಞರು ‘ಎಕೊವ್ರ್ಯಾಪ್‌’ ವರದಿಯಲ್ಲಿ ಮಾಡಿರುವ ಈ ಅಂದಾಜು, ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾಡಿರುವ ಅಂದಾಜಿಗಿಂತ ಕಡಿಮೆ. ಆರ್‌ಬಿಐ ಅಂದಾಜಿನ ಪ್ರಕಾರ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವು ಏಪ್ರಿಲ್–ಜೂನ್‌ ತ್ರೈಮಾಸಿಕದಲ್ಲಿ ಶೇ 21.4ರಷ್ಟು ಇರಲಿದೆ.

ಕೈಗಾರಿಕಾ ಚಟುವಟಿಕೆ, ಸೇವಾ ವಲಯದ ಚಟುವಟಿಕೆ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯ ಜೊತೆ ಬೆಸೆದುಕೊಂಡಿರುವ 41 ಸೂಚ್ಯಂಕಗಳನ್ನು ಆಧರಿಸಿ, ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯನ್ನು ಅಂದಾಜಿಸುವ ‘ನೌವ್‌ಕಾಸ್ಟಿಂಗ್’ ಮಾದರಿಯನ್ನು ಎಸ್‌ಬಿಐ ರೂಪಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.