ADVERTISEMENT

ತಯಾರಿಕಾ ಚಟುವಟಿಕೆ 12 ತಿಂಗಳ ಕನಿಷ್ಠ

ಪಿಟಿಐ
Published 2 ಜನವರಿ 2025, 14:36 IST
Last Updated 2 ಜನವರಿ 2025, 14:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ತಯಾರಿಕಾ ವಲಯದ ಬೆಳವಣಿಗೆಯು 2024ರ ಡಿಸೆಂಬರ್‌ನಲ್ಲಿ 12 ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ. ಹೊಸ ಆರ್ಡರ್‌ಗಳ ಕೊರತೆಯೇ ಇದಕ್ಕೆ ಕಾರಣ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆಯ ವರದಿ ಗುರುವಾರ ತಿಳಿಸಿದೆ.

ನವೆಂಬರ್‌ನಲ್ಲಿ 56.5 ಇದ್ದ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಸೂಚ್ಯಂಕವು (ಪಿಎಂಐ) ಡಿಸೆಂಬರ್‌ನಲ್ಲಿ 56.4ಕ್ಕೆ ಇಳಿದಿದೆ. ಹೊಸ ವ್ಯಾಪಾರದ ಬೇಡಿಕೆ ಕುಸಿದಿರುವುದರಿಂದ ಉತ್ಪಾದನೆ ಪ್ರಮಾಣ ಇಳಿದಿದೆ ಎಂದು ತಿಳಿಸಿದೆ. 

ಆದರೆ, ದೀರ್ಘಾವಧಿ ಸರಾಸರಿಗೆ ಹೋಲಿಸಿದರೆ ಸೂಚ್ಯಂಕವು 54.1ಕ್ಕಿಂತ ಹೆಚ್ಚಿದೆ. ಇದು ಸದೃಢವಾದ ಬೆಳವಣಿಗೆಯ ಸೂಚಕವಾಗಿದೆ ಎಂದು ಹೇಳಿದೆ.

ADVERTISEMENT

‘ಹೊಸ ಆರ್ಡರ್‌ಗಳಿಗೆ ಬೇಡಿಕೆ ಕಡಿಮೆಗೊಂಡಿದೆ. ಇದು ಮುಂಬರುವ ತಿಂಗಳುಗಳಲ್ಲಿ ಉತ್ಪಾದನೆಯು ಇಳಿಕೆಯಾಗುವುದನ್ನು ಸೂಚಿಸುತ್ತಿದೆ’ ಎಂದು ಎಚ್‌ಎಸ್‌ಬಿಸಿ ಅರ್ಥಶಾಸ್ತ್ರಜ್ಞ ಇನೆಸ್‌ ಲ್ಯಾಮ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.