ADVERTISEMENT

ತಯಾರಿಕಾ ಚಟುವಟಿಕೆ: 8 ತಿಂಗಳ ಕನಿಷ್ಠ

ಪಿಟಿಐ
Published 1 ಅಕ್ಟೋಬರ್ 2024, 14:18 IST
Last Updated 1 ಅಕ್ಟೋಬರ್ 2024, 14:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಯು ಸೆಪ್ಟೆಂಬರ್‌ನಲ್ಲಿ 8 ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ.

ಕೈಗಾರಿಕಾ ಉತ್ಪಾದನೆ, ಮಾರಾಟ ಮತ್ತು ಹೊಸ ರಫ್ತು ಆರ್ಡರ್‌ಗಳಲ್ಲಿ ಮಂದಗತಿಯಿಂದಾಗಿ ಸೂಚ್ಯಂಕವು ಇಳಿಕೆಯಾಗಿದೆ ಎಂದು ಎಸ್ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆಯ ವರದಿ ಮಂಗಳವಾರ ತಿಳಿಸಿದೆ.

ಎಚ್‌ಎಸ್‌ಬಿಸಿ ಇಂಡಿಯಾದ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಸೂಚ್ಯಂಕದ (ಪಿಎಂಐ) ವರದಿ ಪ್ರಕಾರ, ಆಗಸ್ಟ್‌ನಲ್ಲಿ 57.5 ಇದ್ದ ಸೂಚ್ಯಂಕವು ಸೆಪ್ಟೆಂಬರ್‌ನಲ್ಲಿ 56.5ಕ್ಕೆ ಇಳಿದಿದೆ. 

ADVERTISEMENT

ತಯಾರಿಕಾ ವೆಚ್ಚ ಮತ್ತು ಮಾರಾಟ ಶುಲ್ಕದಲ್ಲಿ ಏರಿಕೆಯಾಗಿದೆ. ಇದರ ಪರಿಣಾಮ ಖರೀದಿ ದರ ಹೆಚ್ಚಳವಾಗಿದೆ. ಕಾರ್ಮಿಕರ ವೆಚ್ಚ ಮತ್ತು ಬೇಡಿಕೆಯಿಂದಾಗಿ ತಯಾರಕರು ಶುಲ್ಕವನ್ನು ಏರಿಕೆ ಮಾಡಿದ್ದಾರೆ ಎಂದು ತಿಳಿಸಿದೆ.

‘ಲಾಭದ ಇಳಿಕೆಯು ಕಂಪನಿಗಳ ನೇಮಕಾತಿ ಮೇಲೆ ಪರಿಣಾಮ ಬೀರಿದೆ. ಮೂರನೇ ತಿಂಗಳು ಉದ್ಯೋಗ ಸೃಷ್ಟಿಯು ಮಂದಗತಿಯಲ್ಲಿದೆ’ ಎಂದು ಎಚ್‌ಎಸ್‌ಬಿಸಿಯ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.