ADVERTISEMENT

ಫೆಬ್ರುವರಿಯಲ್ಲಿ ಹಿಂಡಿ ರಫ್ತು ಶೇ 9ರಷ್ಟು ಏರಿಕೆ

ಪಿಟಿಐ
Published 15 ಮಾರ್ಚ್ 2024, 14:25 IST
Last Updated 15 ಮಾರ್ಚ್ 2024, 14:25 IST
   

ನವದೆಹಲಿ: ದೇಶದ ಹಿಂಡಿಯ ರಫ್ತು ಫೆಬ್ರುವರಿಯಲ್ಲಿ ಶೇ 9ರಷ್ಟು ಏರಿಕೆ ಆಗಿದೆ. ಇದೇ ಅವಧಿಯಲ್ಲಿ ಸೋಯಾಬಿನ್‌  ಹಿಂಡಿಯ ರಫ್ತು ಕೂಡ ಹೆಚ್ಚಳವಾಗಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ 4.71 ಲಕ್ಷ ಟನ್‌ ಹಿಂಡಿ ರಫ್ತಾಗಿದ್ದರೆ, ಈ ಫೆಬ್ರುವರಿಯಲ್ಲಿ 5.15 ಲಕ್ಷ ಟನ್‌ಗೆ ಏರಿಕೆ ಆಗಿದೆ ಎಂದು ಭಾರತೀಯ ಗಿರಣಿ ಮಾಲೀಕರ ಸಂಘ (ಎಸ್‌ಇಎ) ತಿಳಿಸಿದೆ.

ಫೆಬ್ರುವರಿಯಲ್ಲಿ ಒಟ್ಟು ಹಿಂಡಿ ರಫ್ತು ಪೈಕಿ ಸೋಯಾಬಿನ್‌ ಹಿಂಡಿ 3.47 ಲಕ್ಷ ಟನ್‌ ಮತ್ತು ಸಾಸಿವೆ ಹಿಂಡಿ 1.44 ಲಕ್ಷ ಟನ್‌ ಸೇರಿವೆ. 

ADVERTISEMENT

2023–24ರ ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ಒಟ್ಟು 44.90 ಲಕ್ಷ ಟನ್‌ ರಫ್ತಾಗಿದ್ದರೆ, ಹಿಂದಿನ ಇದೇ ಅವಧಿಯಲ್ಲಿ 37.60 ಲಕ್ಷ ಟನ್‌ ರಫ್ತಾಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಶೇ 19ರಷ್ಟು ಏರಿಕೆಯಾಗಿದೆ. ಸೋಯಾಬಿನ್‌ ಹಿಂಡಿ ರಫ್ತು 7.87 ಲಕ್ಷ ಟನ್‌ನಿಂದ 19.34 ಲಕ್ಷ ಟನ್‌ಗೆ ಹೆಚ್ಚಳವಾಗಿದ್ದರೆ, ಸಾಸಿವೆ ಹಿಂಡಿ ರಫ್ತು 20.48 ಲಕ್ಷ ಟನ್‌ನಿಂದ 20.40 ಲಕ್ಷ ಟನ್‌ಗೆ ಇಳಿದಿದೆ. ಅರ್ಜೆಂಟೀನಾದಲ್ಲಿನ ಕಡಿಮೆ ಬೆಲೆಯಿಂದಾಗಿ ದೇಶದ ಸೋಯಾಕಾಳುಗಳ ಹಿಂಡಿ ರಫ್ತು ಇಳಿಕೆಯಾಗಿದೆ.

ಇರಾನ್‌, ಭಾರತದ ಸೋಯಾಬಿನ್‌ ಕಾಳುಗಳ ಹಿಂಡಿಯ ದೊಡ್ಡ ಆಮದುಗಾರನಾಗಿ ಹೊರಹೊಮ್ಮುತ್ತಿದೆ. ಫೆಬ್ರುವರಿಯಲ್ಲಿ 3.41 ಲಕ್ಷ ಟನ್‌ ಹಿಂಡಿ ಖರೀದಿಸಿದ್ದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ 3,946 ಟನ್‌ ಖರೀದಿಸಿತ್ತು ಎಂದು ಎಸ್‌ಇಎ ಅಂಕಿ ಅಂಶಗಳು ತಿಳಿಸಿವೆ.

ದೇಶ;2024;2023 (ಹಿಂಡಿ ರಫ್ತು ಲಕ್ಷ ಟನ್‌ಗಳಲ್ಲಿ)

ದಕ್ಷಿಣ ಕೊರಿಯಾ; 7.87; 8.80

ವಿಯೆಟ್ನಾಂ; 3.94; 8.85

ಥಾಯ್ಲೆಂಡ್‌; 6.04; 6.84

ಬಾಂಗ್ಲಾದೇಶ; 7.79; 4.48

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.