ADVERTISEMENT

ಕರೆನ್ಸಿ ಚಲಾವಣೆ: ₹50,800 ಕೋಟಿ ಏರಿಕೆ

ರಾಯಿಟರ್ಸ್
Published 4 ಆಗಸ್ಟ್ 2022, 21:15 IST
Last Updated 4 ಆಗಸ್ಟ್ 2022, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದಲ್ಲಿ ಕರೆನ್ಸಿಗಳ ಚಲಾವಣೆಯಲ್ಲಿ ಆಗಿರುವ ಹೆಚ್ಚಳವು ಹಿಂದಿನ ಹಣಕಾಸು ವರ್ಷದ ಏಪ್ರಿಲ್‌–ಜುಲೈ ಅವಧಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜುಲೈ ಅವಧಿಯಲ್ಲಿ ಇಳಿಕೆ ಆಗಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮಾಹಿತಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜುಲೈ ಅವಧಿಯಲ್ಲಿ ಕರೆನ್ಸಿಗಳ ಚಲಾವಣೆಯು ₹50,800ಕೋಟಿಗಳಷ್ಟು ಹೆಚ್ಚಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 92,800 ಕೋಟಿಗಳಷ್ಟುಏರಿಕೆಕಂಡಿತ್ತು. 2020–21ರ ಏಪ್ರಿಲ್‌–ಜುಲೈ ಅವಧಿಯಲ್ಲಿ ₹ 2.25 ಲಕ್ಷ ಕೋಟಿಗಳಷ್ಟು ಹೆಚ್ಚಾಗಿತ್ತು.

ಆರ್ಥಿಕ ಚಟುವಟಿಕೆಗಳು ಕೋವಿಡ್‌ಗೂ ಮುಂಚಿನ ಮಟ್ಟಕ್ಕೆ ಮರಳಿವೆ. ಹೀಗಾಗಿ ಜನರು ಆತಂಕಕ್ಕೆ ಒಳಗಾಗಿ ಬ್ಯಾಂಕ್‌ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಗದು ಹಿಂದಕ್ಕೆ ಪಡೆಯುವ ಅಗತ್ಯ ಇಲ್ಲದಂತಾಗಿದೆ. ಈ ಕಾರಣದಿಂದಾಗಿ ಚಲಾವಣೆಯಲ್ಲಿ ಇರುವ ನಗದು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರೊಬ್ಬರು ಹೇಳಿದ್ದಾರೆ.

ADVERTISEMENT

2020–21ರಲ್ಲಿ ಕರೆನ್ಸಿಗಳ ಚಲಾವಣೆಯು ₹ 4 ಲಕ್ಷ ಕೋಟಿಗೂ ಹೆಚ್ಚಿನಏರಿಕೆಕಂಡಿತ್ತು. 2021–22ನೇ ಹಣಕಾಸು ವರ್ಷದಲ್ಲಿ ಹೆಚ್ಚಳವು ₹ 2.80 ಲಕ್ಷಕೋಟಿತಗ್ಗಿತ್ತು. ಮಾರುಕಟ್ಟೆಯ ಪಾಲುದಾರರ ಪ್ರಕಾರ, ಕರೆನ್ಸಿಗಳ ಹೆಚ್ಚಳವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇನ್ನಷ್ಟು ಇಳಿಕೆ ಕಾಣುವ ನಿರೀಕ್ಷೆ ಇದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದವರೆಗೆ ದೇಶದಲ್ಲಿ ಪ್ರಮುಖ ಯಾವುದೇ ಚುನಾವಣೆಗಳು ಇಲ್ಲ. ಹೀಗಾಗಿ, ಪೂರ್ತಿ ವರ್ಷಕ್ಕೆ ಕರೆನ್ಸಿಗಳ ಹೆಚ್ಚಳವು ₹ 2 ಲಕ್ಷ ಕೋಟಿಗಳಷ್ಟು ಆಗಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.