ADVERTISEMENT

ತಾಳೆ ಎಣ್ಣೆ ಆಮದು ಭಾರಿ ಹೆಚ್ಚಳ ಇಲ್ಲ: ವಿತರಕರ ಅಭಿಪ್ರಾಯ

ರಾಯಿಟರ್ಸ್
Published 20 ಮೇ 2022, 11:47 IST
Last Updated 20 ಮೇ 2022, 11:47 IST
ತಾಳೆ ಹಣ್ಣಿನ ಗೊಂಚಲುಗಳಿರುವ ಲಾರಿಗಳು ಇಂಡೊನೇಷ್ಯಾದ ಫ್ಯಾಕ್ಟರಿಯೊಂದರಲ್ಲಿ ನಿಂತಿರುವುದು –ರಾಯಿಟರ್ಸ್‌ ಚಿತ್ರ
ತಾಳೆ ಹಣ್ಣಿನ ಗೊಂಚಲುಗಳಿರುವ ಲಾರಿಗಳು ಇಂಡೊನೇಷ್ಯಾದ ಫ್ಯಾಕ್ಟರಿಯೊಂದರಲ್ಲಿ ನಿಂತಿರುವುದು –ರಾಯಿಟರ್ಸ್‌ ಚಿತ್ರ   

ಮುಂಬೈ: ಇಂಡೊನೇಷ್ಯಾವು ತಾಳೆ ಎಣ್ಣೆ ರಫ್ತು ನಿಷೇಧ ಹಿಂಪಡೆದಿದ್ದರೂ ಜೂನ್‌ನಲ್ಲಿ ಭಾರತವು ಆಮದು ಮಾಡಿಕೊಳ್ಳುವ ತಾಳೆ ಎಣ್ಣೆ ಪ್ರಮಾಣದಲ್ಲಿ ಭಾರಿ ಹೆಚ್ಚಳ ಆಗಲಿಕ್ಕಿಲ್ಲ ಎಂದು ವಿತರಕರು ಹೇಳಿದ್ದಾರೆ.

ತಾಳೆ ಎಣ್ಣೆ ಬೆಲೆ ಏರಿಕೆ ಆಗಿರುವುದರಿಂದ ಸಂಸ್ಕರಣಾಗಾರರು ಸೋಯಾ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಹೀಗಾಗಿ ಇಂಡೊನೇಷ್ಯಾ ದೇಶವು ರಫ್ತು ನಿಷೇಧ ಹಿಂಪಡೆದ ಬಳಿಕ ಭಾರತಕ್ಕೆ ಆಮದಾಗುವ ಪ್ರಮಾಣದಲ್ಲಿ ಭಾರಿ ಏರಿಕೆ ಆಗುವುದಿಲ್ಲ ಎಂದಿದ್ದಾರೆ.

ಭಾರತವು ಅರ್ಜೆಂಟೀನಾ, ಬ್ರೆಜಿಲ್‌ ಮತ್ತು ಅಮೆರಿಕದಿಂದ ಸೋಯಾ ಎಣ್ಣೆ ಆಮದು ಮಾಡಿಕೊಳ್ಳುವುದು ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.

ADVERTISEMENT

ಇಂಡೊನೇಷ್ಯಾವು ರಫ್ತು ನಿಷೇಧ ಹೇರಿದ್ದರಿಂದ ಬೆಲೆ ಏರಿಕೆ ಆಗಿದೆ. ಹೀಗಾಗಿ ಭಾರತವು ತಾಳೆ ಎಣ್ಣೆ ಖರೀದಿಗೆ ಆತುರ ತೋರುವುದಿಲ್ಲ ಎಂದು ಸನ್‌ವಿನ್‌ ಸಮೂಹದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಂದೀಪ್‌ ಬಜೋರಿಯಾ ಹೇಳಿದ್ದಾರೆ.

ಏಪ್ರಿಲ್‌ನಲ್ಲಿ 5.72 ಲಕ್ಷ ಟನ್‌ ತಾಳೆ ಎಣ್ಣೆ ಆಮದಾಗಿತ್ತು. ಮೇನಲ್ಲಿ 5 ಲಕ್ಷ ಟನ್‌ಗಳಷ್ಟು ಆಗುವ ಅಂದಾಜು ಮಾಡಲಾಗಿದೆ ಎಂದು ವಿತರಕರು ಹೇಳಿದ್ದಾರೆ.

ಜೂನ್‌ನಲ್ಲಿ ತಾಳೆ ಎಣ್ಣೆ ಆಮದು ಹೆಚ್ಚಾಗಲಿದೆ. ಆದರೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುವುದಿಲ್ಲ ಎಂದು ಮುಂಬೈ ಮೂಲದ ವಿತರಕರೊಬ್ಬರು ತಿಳಿಸಿದ್ದಾರೆ. ಜೂನ್‌ನಲ್ಲಿ ಆಮದು ಪ್ರಮಾಣವು 5.50 ಲಕ್ಷ ಟನ್‌ ಆಗುವ ಅಂದಾಜು ಮಾಡಲಾಗಿದೆ. ಭಾರತವು ಪ್ರತಿ ತಿಂಗಳು ಸರಾಸರಿ 7 ಲಕ್ಷ ಟನ್‌ ಆಮದು ಮಾಡಿಕೊಳ್ಳುತ್ತದೆ.

ಸೋಯಾ ಎಣ್ಣೆ ಆಮದು 2.73 ಲಕ್ಷ ಟನ್‌ನಿಂದ 4.50 ಲಕ್ಷ ಟನ್‌ಗೆ ಏರಿಕೆ ಆಗುವ ನಿರೀಕ್ಷೆ ಇದೆ. ಜೂನ್‌ನಲ್ಲಿ 4.80 ಲಕ್ಷ ಟನ್‌ಗೆ ತಲುಪಬಹುದು ಎಂದೂ ವರ್ತಕರು ತಿಳಿಸಿದ್ದಾರೆ.

ತಾಳೆ ಎಣ್ಣೆ ಆಮದು ವಿವರ (ಲಕ್ಷ ಟನ್‌)

ಏಪ್ರಿಲ್‌: 5.72

ಮೇ: 5 (ಅಂದಾಜು)

ಜೂನ್‌: 5.5 (ನಿರೀಕ್ಷೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.