ADVERTISEMENT

2022ರ ಏಪ್ರಿಲ್‌–ಜೂನ್‌ ತ್ರೈಮಾಸಿಕ ಅವಧಿ: ಚಿನ್ನದ ಬೇಡಿಕೆ ಶೇ 43ರಷ್ಟು ಹೆಚ್ಚಳ

ಪಿಟಿಐ
Published 28 ಜುಲೈ 2022, 11:43 IST
Last Updated 28 ಜುಲೈ 2022, 11:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದಲ್ಲಿ ಚಿನ್ನದ ಬೇಡಿಕೆಯು ಈ ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಶೇಕಡ 43ರಷ್ಟು ಹೆಚ್ಚಾಗಿದ್ದು, 170.7 ಟನ್‌ಗಳಿಗೆ ತಲುಪಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಗುರುವಾರ ತಿಳಿಸಿದೆ. 2021ರ ಇದೇ ಅವಧಿಯಲ್ಲಿ ಚಿನ್ನದ ಬೇಡಿಕೆಯು 119.6 ಟನ್‌ ಆಗಿತ್ತು.

ಮದುವೆ ಸಮಾರಂಭ ಮತ್ತು ಅಕ್ಷಯ ತೃತೀಯಾ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಯು ಶೇ 49ರಷ್ಟು ಹೆಚ್ಚಾಗಿದ್ದು 140.3 ಟನ್‌ಗೆ ತಲುಪಿದೆ. ಹಿಂದಿನ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕೋವಿಡ್‌ನ ಎರಡನೇ ಅಲೆಯಿಂದಾಗಿ ಬೇಡಿಕೆ ಮೇಲೆ ಪರಿಣಾಮ ಉಂಟಾಗಿತ್ತು ಎಂದು ಡಬ್ಲ್ಯುಜಿಸಿನ ಭಾರತದ ಸಿಇಒ ಸೋಮಸುಂದರಂ ಪಿ.ಆರ್‌. ತಿಳಿಸಿದ್ದಾರೆ.

2022ರಲ್ಲಿ ದೇಶದಲ್ಲಿ ಚಿನ್ನದ ಬೇಡಿಕೆಯು 800–850 ಟನ್‌ಗಳಷ್ಟು ಇರುವ ಅಂದಾಜು ಮಾಡಲಾಗಿದೆ. ಆದರೆ, ಹಣದುಬ್ಬರ, ಚಿನ್ನದ ದರ, ರೂಪಾಯಿ–ಡಾಲರ್‌ ವಿನಿಮಯ ದರ ಮತ್ತು ಹಣಕಾಸು ನೀತಿಯು ಮುಂಬರುವ ದಿನಗಳಲ್ಲಿ ಚಿನ್ನದ ಖರೀದಿ ಮೇಲೆ ಪರಿಣಾಮ ಬೀರಲಿವೆ ಎಂದು ಅವರು ತಿಳಿಸಿದ್ದಾರೆ. 2021ರಲ್ಲಿ ಚಿನ್ನದ ಬೇಡಿಕೆಯು 797 ಟನ್‌ ಆಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಜೂನ್‌ ತ್ರೈಮಾಸಿಕದಲ್ಲಿ 23.3 ಟನ್‌ ಚಿನ್ನವನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಲಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 19.7 ಟನ್‌ ಚಿನ್ನವನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಜೂನ್‌ ತ್ರೈಮಾಸಿಕದಲ್ಲಿ ಜಾಗತಿಕ ಚಿನ್ನ ಬೇಡಿಕೆಯು ಶೇ 8ರಷ್ಟು ಇಳಿಕೆ ಆಗಿದೆ ಎಂದು ವರದಿ ತಿಳಿಸಿದೆ.

ಚಿನ್ನದ ಬೇಡಿಕೆ
2022 ಏಪ್ರಿಲ್‌–ಜೂನ್‌:
₹ 79,270 ಕೋಟಿ
2021 ಏಪ್ರಿಲ್‌–ಜೂನ್‌: ₹ 51,540 ಕೋಟಿ
54% ಏರಿಕೆ

ಚಿನ್ನದ ಮೇಲಿನ ಹೂಡಿಕೆ
2022 ಏಪ್ರಿಲ್‌–ಜೂನ್‌:
₹ 14,140 ಕೋಟಿ
2021 ಏಪ್ರಿಲ್‌–ಜೂನ್‌:₹ 10,930 ಕೋಟಿ
20% ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.