ADVERTISEMENT

1.5 ಕೋಟಿ ಬ್ಯಾರಲ್‌ ರಷ್ಯಾ ತೈಲ ಖರೀದಿಸಿದ ರಿಲಯನ್ಸ್‌

ರಾಯಿಟರ್ಸ್
Published 22 ಏಪ್ರಿಲ್ 2022, 12:45 IST
Last Updated 22 ಏಪ್ರಿಲ್ 2022, 12:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಷ್ಯಾ–ಉಕ್ರೇನ್‌ ಸಂಘರ್ಷ ಆರಂಭ ಆದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌, ರಷ್ಯಾದಿಂದ 1.5 ಕೋಟಿ ಬ್ಯಾರಲ್‌ಗಳಷ್ಟು ಕಚ್ಚಾ ತೈಲ ಖರೀದಿಸಿದೆ ಎಂದು ವ್ಯಾಪಾರಿ ಮೂಲಗಳು ಹೇಳಿವೆ.

ಜೂನ್‌ ತ್ರೈಮಾಸಿಕದಲ್ಲಿ 50 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಖರೀದಿ ಮಾಡಿದೆ ಎಂದು ಮಾಹಿತಿ ನೀಡಿವೆ. ಈ ಕುರಿತು ರಿಲಯನ್ಸ್‌ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

80 ಲಕ್ಷ ಬ್ಯಾರಲ್‌ ರಷ್ಯಾ ತೈಲವು ರಿಲಯನ್ಸ್ ನಿರ್ವಹಿಸುತ್ತಿರುವ ಸಿಕ್ಕಾ ಬಂದರಿಗೆ ಬಂದಿದೆ ಎಂದು ರಿಫಿನಿಟಿವ್‌ ಕಂಪನಿಯು ಹೇಳಿದೆ.

ADVERTISEMENT

ಸಾಗಣೆ ವೆಚ್ಚ ಹೆಚ್ಚಿಗೆ ಇದೆ ಎನ್ನುವ ಕಾರಣಕ್ಕಾಗಿ ಭಾರತದ ಕಂಪನಿಗಳು ರಷ್ಯಾ–ಉಕ್ರೇನ್‌ ಸಂಘರ್ಷಕ್ಕೂ ಮೊದಲು ರಷ್ಯಾದಿಂದ ಅಷ್ಟಾಗಿ ತೈಲ ಖರೀದಿ ಮಾಡುತ್ತಿರಲಿಲ್ಲ.

ಪಾಶ್ಚಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿದ ಬಳಿಕ ರಷ್ಯಾ ದೇಶವು ಕಡಿಮೆ ಬೆಲೆಗೆ ಕಚ್ಚಾ ತೈಲ ನೀಡಲು ಆರಂಭಿಸಿತು. ಹೀಗಾಗಿ ಭಾರತದ ಹಲವು ಕಂಪನಿಗಳು ಖರೀದಿ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.