ADVERTISEMENT

ತಾಂತ್ರಿಕ ದೋಷ: ಸರಿಯಾಗಿ ಅಪ್‌ಡೇಟ್ ಆಗದ ಸೂಚ್ಯಂಕಗಳ ಬೆಲೆಗಳು– ಎನ್‌ಎಸ್ಇ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 6:31 IST
Last Updated 7 ಮಾರ್ಚ್ 2022, 6:31 IST
   

ಮುಂಬೈ: ಭಾರತದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಎರಡು ಪ್ರಮುಖ ಸೂಚ್ಯಂಕಗಳ ಬೆಲೆಗಳು ಸೋಮವಾರ ಸರಿಯಾಗಿ ಅಪ್‌ಡೇಟ್ ಆಗುತ್ತಿಲ್ಲ ಎಂದು ಎನ್‌ಎಸ್‌ಇ ತಿಳಿಸಿದೆ.

ಬ್ಲೂ-ಚಿಪ್ ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ ಮತ್ತು ನಿಫ್ಟಿಯ ಬ್ಯಾಂಕ್ ಸೂಚ್ಯಂಕಗಳು ಕಾಲ ಕಾಲಕ್ಕೆ ಅಪ್‌ಡೇಟ್ ಆಗುತ್ತಿಲ್ಲ ಎಂದು ಎನ್‌ಎಸ್‌ಇ ಹೇಳಿಕೆಯಲ್ಲಿ ತಿಳಿಸಿದೆ. ‘ಸಮಸ್ಯೆಯನ್ನು ಪರಿಹರಿಸುವಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ ಮತ್ತು ಈ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲಾಗುತ್ತದೆ’ಎಂದು ವಿನಿಮಯ ಕೇಂದ್ರವು ಹೇಳಿದೆ.

ಉಳಿದ ಎಲ್ಲ ವಿಭಾಗಗಳ ಚಟುವಟಿಕೆಯೂ ಎಂದಿನಂತೆ ನಡೆಯುತ್ತಿದೆ ಎಂದು ಅದು ಹೇಳಿದೆ.

ADVERTISEMENT

ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಪರಿಣಾಮ ಚ್ಚಾತೈಲ ಬೆಲೆ ಏರಿಕೆಯು ಹೂಡಿಕೆದಾರರನ್ನು ಚಿಂತಿಗೀಡು ಮಾಡಿದ್ದು, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರುಪೇಟೆ ಕುಸಿತ ದಾಖಲಿಸಿದೆ.

ಸೆನ್ಸೆಕ್ಸ್ 1,459.28 ಅಂಶಗಳಷ್ಟು ಕುಸಿದು, 52,874.53 ವಹಿವಾಟು ಆರಂಭಿಸಿತು. ನಿಫ್ಟಿ 420.50 ಅಂಶಗಳಷ್ಟು 15,824.85ರಲ್ಲಿ ವಹಿವಾಟು ಆರಂಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.