ADVERTISEMENT

ಭಾರತ–ಚೀನಾ ವ್ಯಾಪಾರ ಕೊರತೆ ಇಳಿಕೆ: 2019–20ರಲ್ಲಿ ₹ 3.64 ಲಕ್ಷ ಕೋಟಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 14:20 IST
Last Updated 2 ಜುಲೈ 2020, 14:20 IST
   

ನವದೆಹಲಿ: ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆ ಆಗಿರುವುದರಿಂದ ಎರಡೂ ದೇಶಗಳ ನಡುವಣ ವ್ಯಾಪಾರ ಕೊರತೆಯು 2019–20ರಲ್ಲಿ ₹ 3.64 ಲಕ್ಷ ಕೋಟಿಗೆ ತಗ್ಗಿದೆ.

ಚೀನಾ ಜತೆಗಿನ ರಫ್ತು ವಹಿವಾಟು ₹ 4.89 ಲಕ್ಷ ಕೋಟಿಗಳಷ್ಟಿದ್ದರೆ, ಆಮದು ₹ 1.24 ಲಕ್ಷ ಕೋಟಿಗಳಷ್ಟಿತ್ತು ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಚೀನಾದಿಂದ ಪ್ರಮುಖವಾಗಿ ಗೋಡೆ ಗಡಿಯಾರ, ಕೈಗಡಿಯಾರ, ಸಂಗೀತ ವಾದ್ಯಗಳು, ಮಕ್ಕಳ ಆಟಿಕೆ ಸಾಮಗ್ರಿ, ಕ್ರೀಡಾ ಸರಕು, ಪೀಠೋಪಕರಣ, ನೆಲಹಾಸು, ಪ್ಲಾಸ್ಟಿಕ್‌, ಎಲೆಕ್ಟ್ರಿಕ್‌ ಯಂತ್ರೋಪಕರಣ, ಎಲೆಕ್ಟ್ರಿಕ್‌ ಸಾಧನ, ರಾಸಾಯನಿಕ, ರಸಗೊಬ್ಬರ, ಔಷಧಿ ತಯಾರಿಕಾ ಪದಾರ್ಥ, ಲೋಹಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ADVERTISEMENT

ಚೀನಾ ಮೇಲಿನ ಆಮದು ಅವಲಂಬನೆ ತಪ್ಪಿಸಲು ಸರ್ಕಾರವು ಹಲವಾರು ಸರಕುಗಳಿಗೆ ತಾಂತ್ರಿಕ ನಿಯಂತ್ರಣ ಕ್ರಮಗಳನ್ನು ರೂಪಿಸಿದೆ. ಇದರಡಿ 371 ಸರಕುಗಳನ್ನು ಗುರುತಿಸಲಾಗಿದೆ. ಗುಣಮಟ್ಟದ ನಿಯಮಗಳನ್ನು ಪಾಲಿಸಲೂ ಕ್ರಮ ಕೈಗೊಂಡಿದೆ. ಹಲವಾರು ಸರಕುಗಳ ಮೇಲೆ ಸುರಿ ವಿರೋಧಿ ತೆರಿಗೆ ವಿಧಿಸಿದೆ.

ಎಲೆಕ್ಟ್ರಾನಿಕ್‌ ಸರಕು, ಆಟಿಕೆ, ಏರ್ ಕಂಡೀಷನರ್‌, ಸೈಕಲ್‌ ಬಿಡಿಭಾಗ, ರಾಸಾಯನಿಕಗಳು, ಸುರಕ್ಷತಾ ಗಾಜು, ರಾಸಾಯನಿಕಗಳು, ಪ್ರೆಷರ್‌ ಕುಕ್ಕರ್‌ ಸೇರಿದಂತೆ ವಿವಿಧ ಸರಕುಗಳಿಗೆ ಸಂಬಂಧಿಸಿ 50ಕ್ಕೂ ಹೆಚ್ಚು ಗುಣಮಟ್ಟ ನಿಯಂತ್ರಣ ಆದೇಶಗಳನ್ನು ಕಳೆದ ಒಂದು ವರ್ಷದಿಂದ ಹೊರಡಿಸಲಾಗಿದೆ.

ಮೊಬೈಲ್‌ ಫೋನ್‌, ದೂರಸಂಪರ್ಕ, ವಿದ್ಯುತ್‌, ಪ್ಲಾಸ್ಟಿಕ್‌ ಆಟಿಕೆ ಮತ್ತು ಔಷಧಿ ಪದಾರ್ಥ ಪೂರೈಕೆಯಲ್ಲಿ ಚೀನಾ ಗಮನಾರ್ಹ ಪಾಲು ಹೊಂದಿದೆ.

ವರ್ಷ: ವ್ಯಾಪಾರ ಕೊರತೆ ( ₹ ಲಕ್ಷ ಕೋಟಿಗಳಲ್ಲಿ)
2019–20;
₹ 3.64
2018–19; ₹ 4.01
2017–18; ₹ 4.72

14 %:ದೇಶಿ ಆಮದಿನಲ್ಲಿನ ಚೀನಾದ ಪಾಲು

ಚೀನಾದ ಎಫ್‌ಡಿಐ
2019–20;
₹ 1,200 ಕೋಟಿ
2018–19; ₹ 1,725 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.