ADVERTISEMENT

ಆಧಾರ್‌: ಮನೆ ಬಾಗಿಲಿನಲ್ಲೇ ಮೊಬೈಲ್ ಸಂಖ್ಯೆ ಅಪ್ಡೇಟ್

ಪಿಟಿಐ
Published 20 ಜುಲೈ 2021, 14:44 IST
Last Updated 20 ಜುಲೈ 2021, 14:44 IST
   

ನವದೆಹಲಿ: ಆಧಾರ್‌ ಕಾರ್ಡ್‌ನಲ್ಲಿ ಮೊಬೈಲ್‌ ದೂರವಾಣಿ ಸಂಖ್ಯೆ ತಪ್ಪಾಗಿದ್ದರೆ ಅದನ್ನು ಪೋಸ್ಟ್‌ಮ್ಯಾನ್‌ ಸಹಾಯದಿಂದ ಮನೆ ಬಾಗಿಲಿನಲ್ಲೇ ಸರಿಪಡಿಸುವ ಅವಕಾಶ ಲಭ್ಯವಾಗಲಿದೆ.

ಆಧಾರ್‌ ಕಾರ್ಡ್ ಹೊಂದಿರುವವರ ಮೊಬೈಲ್ ದೂರವಾಣಿ ಸಂಖ್ಯೆ ಅಪ್ಡೇಟ್ ಮಾಡಲು ಭಾರತೀಯ ಅಂಚೆ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮತ್ತು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಒಪ್ಪಂದ ಮಾಡಿಕೊಂಡಿವೆ. ಐಪಿಪಿಬಿಯ 650 ಶಾಖೆಗಳು, 1.46 ಲಕ್ಷ ಪೋಸ್ಟ್‌ಮ್ಯಾನ್‌ಗಳು ಹಾಗೂ ಗ್ರಾಮೀಣ ಅಂಚೆ ಸೇವಕರ (ಜಿಡಿಎಸ್‌) ಮೂಲಕ ಈ ಸೇವೆ ಪಡೆದುಕೊಳ್ಳಬಹುದು.

‘ಎಲ್ಲ ಕಡೆಗಳಲ್ಲಿಯೂ ಇರುವ ಅಂಚೆ ಕಚೇರಿಗಳು, ಪೋಸ್ಟ್‌ಮ್ಯಾನ್‌ ಮತ್ತು ಜಿಡಿಎಸ್‌ ನೆರವಿನಿಂದ ಮೊಬೈಲ್‌ ದೂರವಾಣಿ ಸಂಖ್ಯೆಯನ್ನು ಅಪ್ಡೇಟ್ ಮಾಡಿಸಿಕೊಳ್ಳುವ ಸೇವೆಯು ಡಿಜಿಟಲ್ ಕಂದಕವನ್ನು ಮುಚ್ಚುವ ಐ‍ಪಿಪಿಬಿಯ ಉದ್ದೇಶವನ್ನು ಈಡೇರಿಸುವಂತಿಎ’ ಎಂದು ಐಪಿಪಿಬಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೆ. ವೆಂಕಟ್ರಾಮು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.