ADVERTISEMENT

ಜೂನ್‌ನಲ್ಲಿ ಕೈಗಾರಿಕಾ ಉತ್ಪಾದನೆ ಶೇ 12.3ರಷ್ಟು ಬೆಳವಣಿಗೆ

ಪಿಟಿಐ
Published 12 ಆಗಸ್ಟ್ 2022, 14:29 IST
Last Updated 12 ಆಗಸ್ಟ್ 2022, 14:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಕೈಗಾರಿಕಾ ವಲಯದ ಉತ್ಪಾದನೆಯು 2022ರ ಜೂನ್‌ನಲ್ಲಿ ಶೇಕಡ 12.3ರಷ್ಟು ಬೆಳವಣಿಗೆ ಕಂಡಿದೆ. ಆದರೆ, ಇದೇ ವರ್ಷದ ಮೇ ತಿಂಗಳು ಮತ್ತು 2021ರ ಜೂನ್‌ ತಿಂಗಳಿಗೆ ಹೋಲಿಸಿದರೆ ಬೆಳವಣಿಗೆ ಪ್ರಮಾಣದಲ್ಲಿ ಇಳಿಕೆ ಆಗಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಕೈಗಾರಿಕಾ ಉತ್ಪಾದನೆಯು 2022ರ ಮೇನಲ್ಲಿ ಶೇ 19.6ರಷ್ಟು ಬೆಳವಣಿಗೆ ದಾಖಲಿಸಿತ್ತು. 2021ರ ಜೂನ್‌ನಲ್ಲಿ ಶೇ 13.8ರಷ್ಟು ಬೆಳವಣಿಗೆ ಕಂಡಿತ್ತು. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಶುಕ್ರವಾರ ಈ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದೆ.

ತಯಾರಿಕಾ ವಲಯದ ಬೆಳವಣಿಗೆಯು ಶೇ 12.5ರಷ್ಟಾಗಿದೆ. 2021ರ ಜೂನ್‌ನಲ್ಲಿ ಶೇ 13.2ರಷ್ಟು ಬೆಳವಣಿಗೆ ಕಂಡಿತ್ತು. ಗಣಿ ಉತ್ಪಾದನೆಯು ಶೇ 23.1ರಿಂದ ಶೇ 7.5ಕ್ಕೆ ಇಳಿಕೆ ಆಗಿದ್ದರೆ ವಿದ್ಯುತ್ ಉತ್ಪಾದನೆ ಶೇ 8.3ರಿಂದ ಶೇ 16.4ಕ್ಕೆ ಏರಿಕೆ ಕಂಡಿದೆ.

ADVERTISEMENT

ಐಐಪಿಯು 2021ರ ಏಪ್ರಿಲ್‌–ಜೂನ್‌ನಲ್ಲಿ ಕಂಡಿದ್ದ ಶೇ 44.4ರಷ್ಟು ಬೆಳವಣಿಗೆಗೆ ಹೋಲಿಸಿದರೆ 2022ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಶೇ 12.7ರಷ್ಟು ಬೆಳವಣಿಗೆ ಕಂಡಿದೆ.

2020ರ ಮಾರ್ಚ್‌ನಿಂದ ಶುರುವಾದ ಕೋವಿಡ್‌ ಸಾಂಕ್ರಾಮಿಕದ ಅಸಾಧಾರಣ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಹಿಂದಿನ ವರ್ಷದ ಜೂನ್‌ ತಿಂಗಳ ಬೆಳವಣಿಗೆ ದರವನ್ನು ಪರಿಗಣಿಸಬೇಕು ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.