ಕೋಲ್ಕತ್ತ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಹಣದುಬ್ಬರ ಪ್ರಮಾಣವು ಶೇಕಡ 3.2 ಆಗಿರಲಿದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ಅಂದಾಜಿಸಿದೆ. ಈ ಮೊದಲು ಅದು ಹಣದುಬ್ಬರ ಪ್ರಮಾಣ ಶೇ 3.5ರಷ್ಟಾಗಲಿದೆ ಎಂದು ಅಂದಾಜಿಸಿತ್ತು.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಶೇ 1.40ರಷ್ಟು ಕಡಿಮೆ ಆಗಲಿದೆ ಎಂದು ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ಆರ್‌ಬಿಐ ಈ ವರ್ಷ ರೆಪೊ ದರವನ್ನು ಮತ್ತೆ ಶೇ 0.25ರಷ್ಟು ಕಡಿತ ಮಾಡಬಹುದು. ಹಣದುಬ್ಬರ ಇಳಿಕೆ ಮತ್ತು ಬಡ್ಡಿ ದರ ಕಡಿತವು ದೇಶೀಯವಾಗಿ ಬೇಡಿಕೆ ಹೆಚ್ಚಿಸಲಿದೆ ಎಂದು ಹೇಳಿದೆ.
ಮುಂಗಾರು ಹಂಗಾಮಿನಲ್ಲಿ ಸುರಿದ ಅತ್ಯಧಿಕ ಮಳೆಯಿಂದ ಪ್ರಮುಖವಾಗಿ ತೋಟಗಾರಿಕೆ ಬೆಳೆಗಳಿಗೆ ಹಾನಿ ಆಗಿದೆ. ಆಹಾರ ಧಾನ್ಯ ಬೆಳೆಯುವ ಪಂಜಾಬ್‌ನಂತಹ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿವೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.