ADVERTISEMENT

ಪಂಜಾಬ್‌ನ ಮೊಹಾಲಿಯಲ್ಲಿ ₹ 300 ಕೋಟಿ ವೆಚ್ಚದಲ್ಲಿ ಇನ್ಫೊಸಿಸ್ ಕ್ಯಾಂ‍ಪಸ್

ಪಿಟಿಐ
Published 25 ಸೆಪ್ಟೆಂಬರ್ 2025, 9:34 IST
Last Updated 25 ಸೆಪ್ಟೆಂಬರ್ 2025, 9:34 IST
<div class="paragraphs"><p>ಇನ್ಫೊಸಿಸ್</p></div>

ಇನ್ಫೊಸಿಸ್

   

ಚಂಡೀಗಢ: ಬೆಂಗಳೂರು ಮೂಲದ ಇನ್ಫೊಸಿಸ್ ಲಿಮಿಟೆಡ್ ₹ 300 ಕೋಟಿ ವೆಚ್ಚದಲ್ಲಿ ಮೊಹಾಲಿಯಲ್ಲಿ ನೂತನ ಕ್ಯಾಂಪಸ್ ಸ್ಥಾಪಿಸಲಿದೆ ಎಂದು ಪಂಜಾಬ್ ಕೈಗಾರಿಕಾ ಸಚಿವ ಸಂಜೀವ್ ಅರೋರ ತಿಳಿಸಿದ್ದಾರೆ.

ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 30 ಎಕರೆ ಪ್ರದೇಶದಲ್ಲಿ ಹೊಸ ಕ್ಯಾಂಪಸ್ ತಲೆ ಎತ್ತಲಿದೆ ಎಂದು ಹೇಳಿದ್ದಾರೆ.

ADVERTISEMENT

ಮೊದಲ ಹಂತದಲ್ಲಿ 3 ಲಕ್ಷ ಚದರ ಅಡಿಯಲ್ಲಿ ನಿರ್ಮಾಣ ಮಾಡಲಾಗುವುದು. ಇದು ನಗರದಲ್ಲಿ 2,500 ಉದ್ಯೋಗ ಸೃಜಿಸಲಿದೆ ಎಂದು ಹೇಳಿದ್ದಾರೆ.

ಎರಡನೇ ಹಂತದಲ್ಲಿ 4.80 ಲಕ್ಷ ಚದರ ಅಡಿ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

2017ರಿಂದ ಮೊಹಾಲಿಯಲ್ಲಿ ಇನ್ಫೊಸಿಸ್ ಕಾರ್ಯನಿರ್ವಹಿಸುತ್ತಿದ್ದು, ನಗರದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ ಎಂದರು.

ನಮಗೆ ರಾಜ್ಯ ಸರ್ಕಾರದಿಂದ ಈ ಯೋಜನೆಗೆ ಉತ್ತಮ ಬೆಂಬಲ ದಕ್ಕಿದೆ ಎಂದು ಇನ್ಫೊಸಿಸ್ ಮೊಹಾಲಿ ಕೇಂದ್ರದ ಮುಖ್ಯಸ್ಥ ಸಮೀರ್ ಗೋಯಲ್ ತಿಳಿಸಿದ್ದಾರೆ.

ಕೆಲವು ವರ್ಷಗಳಿಂದ ನಾವು ಈ ವಲಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಈ ಪ್ರದೇಶಲ್ಲಿ ನಮ್ಮ ಕಾರ್ಯಾಚರಣೆಯನ್ನು ವಿಸ್ತರಿಸುವುದಕ್ಕೆ ಖುಷಿಯಾಗುತ್ತಿದೆ ಎಂದು ಗೋಯಲ್ ಹೇಳಿದ್ದಾರೆ.

ರಾಜ್ಯ ಸರ್ಕಾರದ ಹಲವು ಉಪಕ್ರಮವು ‍ಪಂಜಾಬ್‌ಗೆ ಹೆಚ್ಚು ಬಂಡವಾಳ ಆಕರ್ಷಿಸಲು ಕಾರಣಗಿದೆ. ಕೈಗಾರಿಕಾ ಯೋಜನೆಗಳಿಗೆ ನಾವು 45 ದಿನಗಳಲ್ಲಿ ಅನುಮೋದನೆ ನೀಡುತ್ತೇವೆ. ಪಂಜಾಬ್‌ನಲ್ಲಿ ಹೂಡಿಕೆ ಮಾಡಲು ಹಲವು ಮಂದಿ ಉತ್ಸುಕರಾಗಿದ್ದಾರೆ ಎನ್ನುವುದು ನಮಗೆ ಸಂತಸ ತಂದಿದೆ ಎಂದು ಸಚಿವ ಸಂಜೀವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.