ADVERTISEMENT

₹6,329 ಕೋಟಿ ತೆರಿಗೆ ಮರುಪಾವತಿ ನಿರೀಕ್ಷೆ: ಇನ್ಫೊಸಿಸ್‌

ಪಿಟಿಐ
Published 31 ಮಾರ್ಚ್ 2024, 15:56 IST
Last Updated 31 ಮಾರ್ಚ್ 2024, 15:56 IST
<div class="paragraphs"><p>ಇನ್ಫೊಸಿಸ್‌</p></div>

ಇನ್ಫೊಸಿಸ್‌

   

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ ₹6,329 ಕೋಟಿಯಷ್ಟು ತೆರಿಗೆ ಮರುಪಾವತಿಯನ್ನು (ರೀಫಂಡ್‌) ನಿರೀಕ್ಷಿಸಲಾಗುತ್ತಿದೆ ಎಂದು ದೇಶದ ಎರಡನೇ ಅತಿದೊಡ್ಡ ಐ.ಟಿ ಸೇವಾ ಕಂಪನಿಯಾದ ಇನ್ಫೊಸಿಸ್‌ ತಿಳಿಸಿದೆ. 

2007–08ರಿಂದ 2015–16, 2017–18 ಹಾಗೂ 2018–19ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯಿಂದ ಮರುಪಾವತಿಯ ಆದೇಶ ಸ್ವೀಕರಿಸಲಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ. 

ADVERTISEMENT

ತೆರಿಗೆ ಪಾವತಿ ಎಷ್ಟು?: 2022–23ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಒಟ್ಟು ₹2,763 ಕೋಟಿ, 2011–12ನೇ ಆರ್ಥಿಕ ವರ್ಷದಲ್ಲಿ ₹4 ಕೋಟಿ ತೆರಿಗೆ ಪಾವತಿಗೆ (ಬಡ್ಡಿ ಸೇರಿದಂತೆ) ಆದೇಶ ಸ್ವೀಕರಿಸಲಾಗಿದೆ. ಕಂಪನಿಯ ಅಂಗಸಂಸ್ಥೆಗಳು ₹277 ಕೋಟಿ ತೆರಿಗೆ ಬಾಧ್ಯತೆಯನ್ನು ಹೊಂದಿವೆ ಎಂದು ವಿವರಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.