ADVERTISEMENT

ಮೂಲಸೌಕರ್ಯ ವಲಯ: ಜನವರಿಯಲ್ಲಿ ಶೇ 0.1ರಷ್ಟು ಅಲ್ಪ ಬೆಳವಣಿಗೆ

ಪಿಟಿಐ
Published 27 ಫೆಬ್ರುವರಿ 2021, 10:37 IST
Last Updated 27 ಫೆಬ್ರುವರಿ 2021, 10:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಪ್ರಮುಖ 8 ಮೂಲಸೌಕರ್ಯ ವಲಯಗಳು ಜನವರಿಯಲ್ಲಿ ಶೇ 0.1ರಷ್ಟು ಅಲ್ಪ ಬೆಳವಣಿಗೆ ಸಾಧಿಸಿವೆ. ರಸಗೊಬ್ಬರ, ಉಕ್ಕು ಮತ್ತು ವಿದ್ಯುತ್ ಉತ್ಪದನೆಯಲ್ಲಿಯಲ್ಲಿ ಹೆಚ್ಚಳ ಆಗಿರುವುದರಿಂದ ಈ ಬೆಳವಣಿಗೆ ಸಾಧ್ಯವಾಗಿದೆ.

ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು ಮತ್ತು ಸಿಮೆಂಟ್‌ ವಲಯಗಳು ನಕಾರಾತ್ಮಕ ಬೆಳವಣಿಗೆ ಕಂಡಿವೆ.

2020ರ ಡಿಸೆಂಬರ್‌ನಲ್ಲಿ ಶೇ 0.2ರಷ್ಟು ಬೆಳವಣಿಗೆ ಆಗಿತ್ತು. ಇದಕ್ಕೆ ಹೋಲಿಸಿದರೆ ಶೇ 0.1ರಷ್ಟು ಇಳಿಕೆ ಆಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ತಾತ್ಕಾಲಿಕ ಅಂಕಿ–ಅಂಶಗಳ ಪ್ರಕಾರ, 2020ರ ಜನವರಿಯಲ್ಲಿ ಈ ವಲಯಗಳು ಶೇ 2.2ರಷ್ಟು ಬೆಳವಣಿಗೆ ಕಂಡಿದ್ದವು. ಇದಕ್ಕೆ ಹೋಲಿಸಿದರೆ ಶೇ 2.1ರಷ್ಟು ಕಡಿಮೆಯಾಗಿದೆ.

ADVERTISEMENT

2020–21ರ ‍ಏಪ್ರಿಲ್‌–ಜನವರಿ ಅವಧಿಯಲ್ಲಿ ಈ ವಲಯಗಳ ಬೆಳವಣಿಗೆ ಶೇ 8.8ರಷ್ಟು ಇಳಿಕೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 0.8ರಷ್ಟು ಬೆಳವಣಿಗೆ ಆಗಿತ್ತು. ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) 8 ಪ್ರಮುಖ ಮೂಲಸೌಕರ್ಯ ವಲಯಗಳ ಕೊಡುಗೆಯು ಶೇ 40.27ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.