ಬೆಂಗಳೂರು: ‘ಇಂಪೆಕ್ಸ್ ಡ್ರಿಪ್ಲೆಸ್’ ಸರಣಿಯ ಪ್ರೆಷರ್ ಕುಕ್ಕರ್ಗಳ ತಯಾರಿಕೆ ಹಾಗೂ ಮಾರಾಟಕ್ಕೆ ಕೆಸಿಎಂ ಅಪ್ಲೈಯನ್ಸಸ್ ಪ್ರೈ.ಲಿ. ಕಂಪನಿಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ ಎಂದು ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್ ಪ್ರಕಟಣೆ ತಿಳಿಸಿದೆ.
ಅಲ್ಲದೆ, ಕೆಸಿಎಂ ಅಪ್ಲೈಯನ್ಸಸ್ ಪ್ರೈ.ಲಿ. ಕಂಪನಿಯು ಈ ವಿನ್ಯಾಸದ ಪ್ರೆಷರ್ ಕುಕ್ಕರ್ಗಳನ್ನು ಮಾರಾಟ ಮಾಡುತ್ತಿರುವ ಎಲ್ಲ ಇ–ವಾಣಿಜ್ಯ ವೇದಿಕೆಗಳನ್ನು ಸಂಪರ್ಕಿಸಿ, ಅವು ಆ ಪ್ರೆಷರ್ ಕುಕ್ಕರ್ ಮಾರಾಟ ಮಾಡುವುದನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಸೂಚನೆ ನೀಡಬೇಕು ಎಂದು ಕೋರ್ಟ್ ಏಪ್ರಿಲ್ 13ರಂದು ನೀಡಿರುವ ಆದೇಶದಲ್ಲಿ ಹೇಳಿದೆ ಎಂದು ಪ್ರಕಟಣೆ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.