ADVERTISEMENT

ವಿಮೆಗೆ ಇಂಡಿಯನ್ ಮನಿ ಗ್ರೂಪ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 20:20 IST
Last Updated 17 ಫೆಬ್ರುವರಿ 2019, 20:20 IST

ಬೆಂಗಳೂರು: ಬೆಂಗಳೂರಿನ ಇಂಡಿಯನ್ ಮನಿ ಗ್ರೂಪ್ ಈಗ ವಿಮೆ ದಲ್ಲಾಳಿ ಕ್ಷೇತ್ರ ಪ್ರವೇಶಿಸಿದೆ.

ಇನ್ಶೂರೆನ್ಸ್‌ ಬ್ರೋಕಿಂಗ್‌ ವಹಿವಾಟು ನಡೆಸಲು ‘ಇಂಡಿಯನ್ ಮನಿ ಇನ್ಶೂರೆನ್ಸ್‌ಡಾಟ್‌ಕಾಂ’ಗೆ, ವಿಮೆ ನಿಯಂತ್ರಣ ‘ಮತ್ತು ಅಭಿವೃದ್ಧಿ ಪ್ರಾಧಿಕಾರವು ಅನುಮತಿ ನೀಡಿದೆ.

‘ಜನಸಾಮಾನ್ಯರಲ್ಲಿ ವಿಮೆಯ ಮಹತ್ವದ ಅರಿವು ಮೂಡಿಸಿ, ಹೆಚ್ಚು ಉಪಯುಕ್ತಕರವಾದ ವಿಮೆ ಉತ್ಪನ್ನಗಳನ್ನು ನಮ್ಮ ಸಂಸ್ಥೆಯು ಜನಸಾಮಾನ್ಯರಿಗೆ ತಲುಪಿಸಲಿದೆ’ ಎಂದು ಇಂಡಿಯನ್ ಮನಿ ಗ್ರೂಪ್ ನ ಸಂಸ್ಥಾಪಕ ಸಿ. ಎಸ್. ಸುಧೀರ್ ಅವರು ತಿಳಿಸಿದ್ದಾರೆ.

ADVERTISEMENT

ಈ ಸೇವೆಯು ಸದ್ಯದಲ್ಲೇ ಲಭಿಸಲಿದ್ದು, ಆನ್‌ಲೈನ್‌ನಲ್ಲಿ ಕೇವಲ 2 ನಿಮಿಷಗಳಲ್ಲಿ ವಿಮೆ ಪಡೆದುಕೊಳ್ಳಬಹುದಾಗಿದೆ’ ಎಂದು ಸಂಸ್ಥೆಯ ಸಿಇಒ ನರಸಿಂಹ ಬಿ. ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.