ನವದೆಹಲಿ: ಕೊರೊನಾ ಕವಚ್ ಮತ್ತು ಕೊರೊನಾ ರಕ್ಷಕ್ ವಿಮಾ ಪಾಲಿಸಿಗಳು ಕಂಪನಿಗಳ ಪಾಲಿಗೆ ನಷ್ಟ ತರುತ್ತಿವೆ. ಈ ಕಾರಣದಿಂದಾಗಿ, ವಿಮಾ ಕಂಪನಿಗಳು ಈ ಎರಡು ಪಾಲಿಸಿಗಳ ಪ್ರೀಮಿಯಂ ಮೊತ್ತವನ್ನು ಮರುನಿಗದಿ ಮಾಡಬೇಕು ಎಂದು ಆಗ್ರಹಿಸಿವೆ.
‘ಕೊರೊನಾ ರಕ್ಷಕ್ ಮತ್ತು ಕೊರೊನಾ ಕವಚ್ ಪಾಲಿಸಿಗಳು ಬಹುತೇಕ ಕಂಪನಿಗಳಿಗೆ ನಷ್ಟ ಉಂಟುಮಾಡುತ್ತಿವೆ. ನಾವೆಲ್ಲರೂ ಈ ಎರಡು ವಿಮಾ ಉತ್ಪನ್ನಗಳನ್ನು ಹಿಂದಿನ ವರ್ಷ ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ತಂದಿದ್ದೆವು. ಎರಡೂ ಪಾಲಿಸಿಗಳ ಬೆಲೆ ಬಹಳ ಕಡಿಮೆ’ ಎಂದು ವಿಮಾ ಕಂಪನಿಯೊಂದರ ಹಿರಿಯ ಪ್ರತಿನಿಧಿಯೊಬ್ಬರು ಹೇಳಿದರು.
ಎರಡೂ ಪಾಲಿಸಿಗಳ ಪ್ರೀಮಿಯಂ ಮೊತ್ತವನ್ನು ಮರುನಿಗದಿ ಮಾಡಬೇಕು ಎಂದು ಬಹುತೇಕ ವಿಮಾ ಕಂಪನಿಗಳು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು (ಐಆರ್‌ಡಿಎಐ) ಆಗ್ರಹಿಸಿವೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.