ADVERTISEMENT

ಹೂಡಿಕೆ: 3ನೇ ಸ್ಥಾನಕ್ಕೆ ಇಳಿದ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 23:22 IST
Last Updated 20 ಫೆಬ್ರುವರಿ 2020, 23:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೈಗಾರಿಕೆ ಸ್ಥಾಪನೆ ಉದ್ದೇಶದ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕ ಈಗ ಮೂರನೇ ಸ್ಥಾನಕ್ಕೆ ಇಳಿದಿದೆ.

2019ರಲ್ಲಿನ ಹೂಡಿಕೆ ಪ್ರಸ್ತಾವಗಳಲ್ಲಿ ಶೇ 8ರಷ್ಟು ಇಳಿಕೆ ಕಂಡು ಬಂದಿದೆ. ಕೈಗಾರಿಕೆ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಬಳಿ ಇರುವ ಅಂಕಿ ಅಂಶಗಳ ಪ್ರಕಾರ ಹಿಂದಿನ ವರ್ಷ ರಾಜ್ಯದಲ್ಲಿ ₹ 83,492 ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವಗಳು ಸಲ್ಲಿಕೆಯಾಗಿವೆ.

ಬಂಡವಾಳ ಒಳಹರಿವಿನಲ್ಲಿ ರಾಜ್ಯವು ಈಗ ಗುಜರಾತ್‌, ಮಹಾರಾಷ್ಟ್ರ ನಂತರದ ಮೂರನೇ ಸ್ಥಾನದಲ್ಲಿ ಇದೆ. ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ತೀವ್ರ ಸ್ವರೂಪದ ಪ್ರವಾಹ ಪರಿಸ್ಥಿತಿ ಕಾರಣಕ್ಕೆ ಬಂಡವಾಳ ಹೂಡಿಕೆ ಪ್ರಮಾಣ ಕುಸಿದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ADVERTISEMENT

ರಾಜ್ಯದಲ್ಲಿನ ಪರಿಸ್ಥಿತಿಗೆ ವ್ಯತಿರಿಕ್ತವಾದ ಪರಿಸ್ಥಿತಿ ರಾಷ್ಟ್ರೀಯ ಮಟ್ಟದಲ್ಲಿ ಇದೆ. ದೇಶದಲ್ಲಿನ ಬಂಡವಾಳ ಹೂಡಿಕೆ ಪ್ರಮಾಣವು ಶೇ 48ರಷ್ಟು ಏರಿಕೆಯಾಗಿ ₹ 6.8 ಲಕ್ಷ ಕೋಟಿಗೆ ತಲುಪಿದೆ. ಅದರಲ್ಲಿ ಗುಜರಾತ ರಾಜ್ಯವು ಗರಿಷ್ಠ ಪಾಲು ಹೊಂದಿದೆ.

ರಾಜ್ಯ; ಬಂಡವಾಳ ಹೂಡಿಕೆ

ಗುಜರಾತ್‌; ₹ 3.44 ಲಕ್ಷ ಕೋಟಿ

ಮಹಾರಾಷ್ಟ್ರ; 1.15 ಲಕ್ಷ ಕೋಟಿ

ಕರ್ನಾಟಕ; 83,492 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.