ADVERTISEMENT

ಏರಿದ ಸೂಚ್ಯಂಕ, ಹೆಚ್ಚಿದ ಸಂಪತ್ತು

ಪಿಟಿಐ
Published 26 ಏಪ್ರಿಲ್ 2022, 15:41 IST
Last Updated 26 ಏಪ್ರಿಲ್ 2022, 15:41 IST

ನವದೆಹಲಿ: ದೇಶದ ಷೇರುಪೇಟೆಗಳು ಮಂಗಳವಾರ ಏರಿಕೆಯ ಹಾದಿಗೆ ಮರಳಿದ ಕಾರಣದಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 4.11 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ.

ಮುಂಬೈ ಷೇರು‍ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 776 ಅಂಶದಷ್ಟು, ರಾಷ್ಟ್ರೀಯ ಷೇರು‍ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 246 ಅಂಶದಷ್ಟು ಏರಿಕೆ ಕಂಡಿವೆ.

‘ಕಚ್ಚಾ ತೈಲದ ಬೆಲೆಯು ಇಳಿಕೆ ಆಗಿದ್ದು ಹೂಡಿಕೆದಾರರ ಪಾಲಿಗೆ ಸಮಾಧಾನ ತಂದಿತು. ಆದರೆ ಚೀನಾದಲ್ಲಿನ ಕೋವಿಡ್‌ ಪ್ರಕರಣಗಳು, ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಳದ ಸಾಧ್ಯತೆ ಹಾಗೂ ರಷ್ಯಾ–ಉಕ್ರೇನ್ ಯುದ್ಧವು ಮಾರುಕಟ್ಟೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಈಕ್ವಿಟಿ ಸಂಶೋಧನೆ (ರಿಟೇಲ್) ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಚವಾಣ್ ಹೇಳಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡ 0.75ರಷ್ಟು ಇಳಿಕೆ ಆಗಿ, ಪ್ರತಿ ಬ್ಯಾರೆಲ್‌ಗೆ 101.55 ಡಾಲರ್‌ನಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.