ADVERTISEMENT

ನಿಯಮ ಪಾಲಿಸದ ತೈಲ ಕಂಪನಿಗಳಿಗೆ ಮತ್ತೆ ದಂಡ

ಪಿಟಿಐ
Published 25 ಫೆಬ್ರುವರಿ 2024, 14:46 IST
Last Updated 25 ಫೆಬ್ರುವರಿ 2024, 14:46 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಮೂರನೇ ತ್ರೈಮಾಸಿಕದಲ್ಲೂ ತಮ್ಮ ಮಂಡಳಿಯಲ್ಲಿ ಅಗತ್ಯ ಸಂಖ್ಯೆಯ ನಿರ್ದೇಶಕರನ್ನು ನೇಮಕ ಮಾಡಲು ವಿಫಲವಾದ ಕಾರಣ ಷೇರು ಮಾರುಕಟ್ಟೆಯು (ಸ್ಟಾಕ್‌ ಎಕ್ಸ್‌ಚೇಂಜ್‌) ತೈಲ ಕಂಪನಿಗಳಿಗೆ ದಂಡ ವಿಧಿಸಿದೆ.

ಭಾರತೀಯ ತೈಲ ನಿಗಮ (ಐಒಸಿ), ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ), ಆಯಿಲ್‌ ಇಂಡಿಯಾ ಲಿಮಿಟೆಡ್‌ (ಒಐಎಲ್‌), ಯುಟಿಲಿಟಿ ಗೇಲ್‌, ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಎಚ್‌ಪಿಸಿಎಲ್‌) ಮತ್ತು ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್‌ ಲಿಮಿಟೆಡ್‌ಗೆ (ಎಂಆರ್‌ಪಿಎಲ್‌) ಒಟ್ಟು ₹32.5 ಲಕ್ಷ ದಂಡ ವಿಧಿಸಲಾಗಿದೆ.

ಷೇರು ಮಾರುಕಟ್ಟೆಯ ನಿಯಮದ ಪ್ರಕಾರ ಕಂಪನಿಗಳ ಮಂಡಳಿಯಲ್ಲಿ ಅಗತ್ಯ ಸಂಖ್ಯೆಯ ಸ್ವತಂತ್ರ ನಿರ್ದೇಶಕರು ಮತ್ತು  ಮಹಿಳಾ ನಿರ್ದೇಶಕರು ಇರಬೇಕು. ಈ ನಿಯಮ ಪಾಲನೆ ಮಾಡದ ಕಾರಣ ಹಿಂದಿನ 2 ತ್ರೈಮಾಸಿಕದಲ್ಲೂ ಕಂಪನಿಗಳಿಗೆ ಷೇರುಪೇಟೆ ದಂಡ ವಿಧಿಸಿತ್ತು.

ADVERTISEMENT

ತೈಲ ನಿಗಮವು ಸರ್ಕಾರದ ಸಂಸ್ಥೆಯಾಗಿದ್ದು, ನಿರ್ದೇಶಕರನ್ನು ನೇಮಕ ಮಾಡುವ ಅಧಿಕಾರ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯಕ್ಕೆ ಇರುತ್ತದೆ. ಅದಕ್ಕಾಗಿ ದಂಡವನ್ನು ಪಾವತಿಸಲು ಹೊಣೆಗಾರರನ್ನಾಗಿ ಮಾಡಬಾರದು ಮತ್ತು ಅದನ್ನು ಮನ್ನಾ ಮಾಡುವಂತೆ ತೈಲ ಸಂಸ್ಥೆಗಳು ಷೇರುಪೇಟೆಗೆ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.