ನವದೆಹಲಿ: ಐಟಿಸಿ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸಂಜೀವ್ ಪುರಿ ಅವರನ್ನು ನೇಮಿಸಲಾಗಿದೆ.
ವೈ.ಸಿ. ದೇವೇಶ್ವರ್ ಅವರ ನಿಧನದಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ, ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ ಅವರನ್ನು ನೇಮಿಸಿ ಮುಂಬಡ್ತಿ ನೀಡಲಾಗಿದೆ.
ಸೋಮವಾರ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ನೇಮಕಾತಿ ನಡೆದಿದೆ. ಪುರಿ ಅವರ ಅಧಿಕಾರ ಅವಧಿಸೋಮವಾರದಿಂದಲೇ ಜಾರಿಗೆ ಬಂದಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
ಲಾಭ ಹೆಚ್ಚಳ: 2018–19ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಐಟಿಸಿ ಲಿಮಿಟೆಡ್ನ ನಿವ್ವಳ ಲಾಭ ಶೇ 18.72ರಷ್ಟು ಹೆಚ್ಚಾಗಿ ₹ 3,482 ಕೋಟಿಗೆ ತಲುಪಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹ 2,932 ಕೋಟಿ ಇತ್ತು.
ಕಂಪನಿಯ ಒಟ್ಟಾರೆ ವರಮಾನ ₹ 11,330 ಕೋಟಿ ಗಳಿಂದ ₹ 12,946 ಕೋಟಿ ಗಳಿಗೆ ಶೇ 14ರಷ್ಟು ಹೆಚ್ಚಾಗಿದೆ.
ಲಾಭಾಂಶ: ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ₹ 5.75ರಂತೆ ಲಾಭಾಂಶ ನೀಡಲುಕಂಪನಿಯ ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.