ADVERTISEMENT

ಐಟಿಸಿ ಸನ್‌ಫೀಸ್ಟ್‌ ಯಿಪ್ಪೀ ನೂಡಲ್ಸ್‌ಗೆ 10 ವರ್ಷ ಪೂರ್ಣ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 19:30 IST
Last Updated 22 ಸೆಪ್ಟೆಂಬರ್ 2020, 19:30 IST
ಐಟಿಸಿ ಸನ್‌ಫೀಸ್ಟ್‌  ಯಿಪ್ಪೀ ನೂಡಲ್ಸ್‌
ಐಟಿಸಿ ಸನ್‌ಫೀಸ್ಟ್‌  ಯಿಪ್ಪೀ ನೂಡಲ್ಸ್‌   

ಬೆಂಗಳೂರು: ವೈವಿಧ್ಯಮಯ ವಹಿವಾಟು ನಡೆಸುವ ಉದ್ಯಮ ಐಟಿಸಿ ಲಿಮಿಟೆಡ್‌ನ ಸನ್‍ಫೀಸ್ಟ್ ಯಿಪ್ಪೀ, ಅತ್ಯಂತ ಜನಪ್ರಿಯ ಇನ್‍ಸ್ಟಂಟ್ ನೂಡಲ್ಸ್ ಬ್ರ್ಯಾಂಡ್‍ಗಳ ಪೈಕಿ ಒಂದಾಗಿದ್ದು, 10 ವರ್ಷಗಳನ್ನು ಪೂರ್ಣಗೊಳಿಸಿದೆ.

ಕಳೆದ 10 ವರ್ಷಗಳಲ್ಲಿ ಸನ್‌ಫೀಸ್ಟ್‌ ಯಿಪ್ಪೀ ದೇಶದ ಎರಡನೇ ಅತಿದೊಡ್ಡ ಇನ್‍ಸ್ಟಂಟ್ ನೂಡಲ್ಸ್ ಬ್ರ್ಯಾಂಡ್ ಆಗಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 50ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿದೆ.

ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಅವರು ಈ ಇನ್‌ಸ್ಟಂಟ್‌ ನೂಡಲ್ಸ್‌ನ ಪ್ರಚಾರ ರಾಯಭಾರಿಯಾಗಿದ್ದಾರೆ. ಬ್ರ್ಯಾಂಡ್‍ನ 10ನೇ ವಾರ್ಷಿಕೋತ್ಸವ ಸಂಭ್ರಮದ ಅನುಭವ ಪಡೆಯಲು ಸನ್‍ಫೀಸ್ಟ್ ಯಿಪ್ಪೀಯ ಫೇಸ್‍ಬುಕ್ ಇವೆಂಟ್ ಪೇಜ್‍ಗೆ ಗ್ರಾಹಕರು ಭೇಟಿ ಕೊಡಬಹುದು. ಮಾರುಕಟ್ಟೆಗೆ ಬಿಡುಗಡೆಗೊಂಡ ದಶಮಾನೋತ್ಸವ ಆಚರಿಸಲು ಫೇಸ್‍ಬುಕ್‍ ಪುಟಕ್ಕೆ ಗ್ರಾಹಕರನ್ನು ಆಹ್ವಾನಿಸಲಾಗಿದೆ. ಗ್ರಾಹಕರು ತಾವು ನೂಡಲ್ಸ್ ಸವಿಯುವ ಕ್ಷಣಗಳನ್ನು ಸೆರೆ ಹಿಡಿದು ಅವುಗಳನ್ನು ಆ ಪುಟದಲ್ಲಿ ಹಂಚಿಕೊಳ್ಳುವಂತೆ ಕೇಳಿಕೊಳ್ಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.