ADVERTISEMENT

ಐಟಿಆರ್‌ ಸಲ್ಲಿಕೆ ಗಡುವು ಆಗಸ್ಟ್‌ 31ರವರೆಗೆ ವಿಸ್ತರಣೆ

ಪಿಟಿಐ
Published 23 ಜುಲೈ 2019, 19:40 IST
Last Updated 23 ಜುಲೈ 2019, 19:40 IST
   

ನವದೆಹಲಿ: ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಯ (ಐಟಿಆರ್‌) ಗಡುವು ಆಗಸ್ಟ್‌ 31ರವರೆಗೆ ವಿಸ್ತರಣೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಇದೇ ತಿಂಗಳ (ಜುಲೈ) 31ರ ಒಳಗಾಗಿ ಐಟಿಆರ್ ಸಲ್ಲಿಸುವಂತೆ ಗಡುವು ನೀಡಲಾಗಿತ್ತು.

ಆದರೆ,2018–19ನೇ ಹಣಕಾಸು ವರ್ಷಕ್ಕೆ ಮೂಲದಲ್ಲೇ ತೆರಿಗೆ ಕಡಿತದ (ಟಿಡಿಎಸ್‌) ವಿವರ ಕೈಸೇರಲು ವಿಳಂಬವಾಗಿದೆ. ಹೀಗಾಗಿ ಗಡುವನ್ನುವಿಸ್ತರಿಸುವಂತೆ ಬೇಡಿಕೆ ಕೇಳಿಬಂದಿತ್ತು.

ADVERTISEMENT

ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಈ ಬೇಡಿಕೆಗೆ ಸ್ಪಂದಿಸಿದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.