ಬೆಂಗಳೂರು: ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್‍ನ ಜೇಪೋರ್, ಎಥ್ನಿಕ್ ಫ್ಯಾಷನ್ ಬ್ರ್ಯಾಂಡ್ ಆದ ಶೋಭಿತಂ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.
ಈ ಪಾಲುದಾರಿಕೆಯ ಮೊದಲ ಹಂತವಾಗಿ ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆ, ಹೈದರಾಬಾದ್‌ನ ಜೂಬ್ಲಿ ಹಿಲ್ಸ್ ಮತ್ತು ದೆಹಲಿಯ ಖಾನ್ ಮಾರ್ಕೆಟ್‌ನ ಜೇಪೋರ್ ಮಳಿಗೆ ಹಾಗೂ ಜೇಪೋರ್‌ನ www.jaypore.com ಆನ್‌ಲೈನ್ ವೇದಿಕೆಯಲ್ಲಿ ಶೋಭಿತಂ ಸೀರೆಗಳು ಲಭ್ಯವಿವೆ.
ಆಯ್ದ ಮಳಿಗೆಗಳಲ್ಲಿ ಶೋಭಿತಂನ ವಿದ್ಯಾ ಬಾಲನ್ ಸಂಗ್ರಹವನ್ನು ಸಹ ಆರಂಭಿಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಶೋಭಿತಂನ ಸಂಗ್ರಹಣೆಗಳ ಲಭ್ಯತೆಯನ್ನು ಇನ್ನಷ್ಟು ಮಳಿಗೆಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಶೋಭಿತಂ ಸೀರೆಗಳು ಹ್ಯಾಂಡ್-ಬ್ಲಾಕ್ ಪ್ರಿಂಟ್‍ಗಳು, ಹ್ಯಾಂಡ್ ಪೇಂಟಿಂಗ್, ಕೈ ನೇಯ್ಗೆ, ಜಮ್ದಾನಿ, ಕಾಂಜೀವರಂ, ಮಧುಬನಿ, ಮಹೇಶ್ವರಿ, ಸಿಬೋರಿ ಮತ್ತು ಕಸೂತಿ ಸೇರಿದಂತೆ ವೈವಿಧ್ಯಮಯ ನೇಯ್ಗೆ ಸಂಪ್ರದಾಯಗಳನ್ನು ಪ್ರತಿನಿಧಿಸುವ ಕರಕುಶಲತೆಯನ್ನು ಒಳಗೊಂಡಿವೆ. ಪ್ರತಿಯೊಂದು ಸೀರೆಯೂ ಆಯಾ ರಾಜ್ಯದ ಕಲಾತ್ಮಕತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಎಮದು ಹೇಳಿದೆ.
‘ಶೋಭಿತಂ ಜೊತೆಗಿನ ಈ ಪಾಲುದಾರಿಕೆಯು ಭಾರತದ ಕುಶಲಕರ್ಮಿ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತುತಪಡಿಸುವ ಮತ್ತೊಂದು ಹೆಜ್ಜೆಯಾಗಿದೆ. ಭಾರತದ ಕರಕುಶಲ ಕಲೆಗಳ ಸಂಪ್ರದಾಯಗಳನ್ನು ಆಚರಿಸಲು ಮತ್ತು ಸಂರಕ್ಷಿಸಲು ಬದ್ಧರಾಗಿದ್ದೇವೆ’ ಎಂದು ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್‍ನ ಎಥ್ನಿಕ್ ಬ್ಯುಸಿನೆಸ್‍ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸೂರಜ್ ಭಟ್ ಹೇಳಿದ್ದಾರೆ.
‘ಭಾರತೀಯ ಮತ್ತು ಜಾಗತಿಕ ಗ್ರಾಹಕರಿಗೆ ಅಸಾಧಾರಣ ಮೌಲ್ಯ ನೀಡಲು ಹೆಸರು ವಾಸಿಯಾದ ಜೇಪೋರ್ ಜೊತೆಗಿನ ಪಾಲುದಾರಿಕೆ ನಮ್ಮನ್ನು ರೋಮಾಂಚನಗೊಳಿಸಿದೆ’ ಎಂದು ಶೋಭಿತಂ ಮುಖ್ಯ ಉತ್ಪನ್ನ ಅಧಿಕಾರಿ ಮತ್ತು ಸಹ ಸಂಸ್ಥಾಪಕಿ ಅಪರ್ಣಾ ತ್ಯಾಗರಾಜನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.