ADVERTISEMENT

ವಿಮಾನ ಇಂಧನ ದರ ಶೇ 3ರಷ್ಟು ಇಳಿಕೆ

ಪಿಟಿಐ
Published 1 ಏಪ್ರಿಲ್ 2021, 14:45 IST
Last Updated 1 ಏಪ್ರಿಲ್ 2021, 14:45 IST
   

ನವದೆಹಲಿ: ಎರಡು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ವಿಮಾನ ಇಂಧನ (ಎಟಿಎಫ್‌) ದರ ಇಳಿಕೆ ಮಾಡಲಾಗಿದೆ. ಕಚ್ಚಾ ತೈಲ ದರದಲ್ಲಿ ಇಳಿಕೆ ಆಗಿರುವುದರಿಂದ ವಿಮಾನ ಇಂಧನ ದರವನ್ನು ಶೇಕಡ 3ರಷ್ಟು ತಗ್ಗಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ವಿಮಾನ ಇಂಧನ ದರವು ಪ್ರತಿ ಕಿಲೊ ಲೀಟರಿಗೆ ₹ 1,887ರಷ್ಟು ಇಳಿಕೆ ಆಗಿದ್ದು, ₹ 58,374.16ಕ್ಕೆ ತಲುಪಿದೆ. ಫೆಬ್ರುವರಿ 1, 16 ಹಾಗೂ ಮಾರ್ಚ್ 1 ಮತ್ತು 16ರಂದು ಒಟ್ಟು ನಾಲ್ಕು ಬಾರಿ ದರ ಹೆಚ್ಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT