ಬೆಂಗಳೂರು: ಮನರಂಜನೆ ಮತ್ತು ಹೆಚ್ಚಿನ ಡೇಟಾ ಸೌಲಭ್ಯ ನೀಡುವ ಕೆಲವು ಹೊಸ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಜಿಯೊ ಮಂಗಳವಾರ ಘೋಷಿಸಿದೆ. ಆರಂಭಿಕ ಯೋಜನೆಯ ಮಾಸಿಕ ಚಂದಾ ಮೊತ್ತವು ₹ 399. ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಒಟಿಟಿ ಚಂದಾದಾರಿಕೆ ಇದರ ಜೊತೆಯಲ್ಲೇ ಲಭ್ಯವಾಗಲಿದೆ.
₹ 399 ಯೋಜನೆಯ ಜೊತೆ 75 ಜಿ.ಬಿ. ಡೇಟಾ ಸಿಗುತ್ತದೆ. ತಿಂಗಳ ಅಂತ್ಯಕ್ಕೆ ಬಳಕೆಯಾಗದೆ ಉಳಿಯುವ ಡೇಟಾ, ಮುಂದಿನ ತಿಂಗಳಿಗೆ ವರ್ಗಾವಣೆ ಆಗುತ್ತದೆ. ಗರಿಷ್ಠ 200 ಜಿ.ಬಿ.ವರೆಗೆ ಹೀಗೆ ಡೇಟಾ ಸೇರ್ಪಡೆ ಆಗುತ್ತಲೇ ಇರುತ್ತದೆ. ಬೇರೆ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಇರುವ ಪೋಸ್ಟ್‌ಪೇಯ್ಡ್ ಗ್ರಾಹಕರನ್ನು ತನ್ನತ್ತ ಸೆಳೆಯಲು ಜಿಯೊ ಈ ಕೊಡುಗೆಗಳನ್ನು ಜಾರಿಗೆ ತಂದಿದೆ ಎಂದು ಮೂಲಗಳು ಹೇಳಿವೆ. ಈ ಮೊದಲು ಜಿಯೊ ₹ 199ರ ಮಾಸಿಕ ಚಂದಾ ಮೊತ್ತದ ಒಂದು ಪೋಸ್ಟ್‌ಪೇಯ್ಡ್ ಕೊಡುಗೆಯನ್ನು ಮಾತ್ರ ಹೊಂದಿತ್ತು.
₹ 399ರ ಮಾಸಿಕ ಚಂದಾ ದರಕ್ಕೆ ನೆಟ್‌ಫ್ಲಿಕ್ಸ್ ಸಿಗುತ್ತಿರುವುದು ಪೋಸ್ಟ್‌ಪೇಯ್ಡ್ ಸೇವೆಗಳಲ್ಲಿ ಇದೇ ಮೊದಲು ಎಂದು ಮೂಲಗಳು ಹೇಳಿವೆ. ಎಲ್ಲಾ ಯೋಜನೆಗಳಲ್ಲೂ ಅನಿಯಮಿತ ಕರೆಗಳ ಸೌಲಭ್ಯ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.