ADVERTISEMENT

ಜಿಯೋ ಹೊಸ ಪ್ಲ್ಯಾನ್

ಪಿಟಿಐ
Published 9 ಮೇ 2020, 16:08 IST
Last Updated 9 ಮೇ 2020, 16:08 IST
   

ನವದೆಹಲಿ: ರಿಲಯನ್ಸ್‌ ಜಿಯೊ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಟಾಪ್‌–ಅಪ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಮನೆಯಿಂದ ಕೆಲಸ ಡುತ್ತಿರುವವರಿಗಾಗಿ‘ನ್ಯೂ ವರ್ಕ್ ಫ್ರಮ್ ಹೋಮ್ ಪ್ಲ್ಯಾನ್’ ನೀಡಿದೆ.

ಕಡಿಮೆ ದರದಲ್ಲಿ ಶೇ 75ರವರೆಗೂ ಹೆಚ್ಚುವರಿ ಡೇಟಾ ಬಳಕೆ ಸಾಧ್ಯವಾಗಲಿದೆ. ವರ್ಷದ ರಿಚಾರ್ಜ್‌ ಪ್ಲ್ಯಾನ್‌ ಪ್ರತಿಸ್ಪರ್ಧಿ ಕಂಪನಿಗಳಿಗೆ ಹೋಲಿಸಿದರೆ ಶೇ 33ರಷ್ಟು ಅಗ್ಗವಾಗಲಿದೆ ಎಂದೂ ಹೇಳಿದೆ.

ಹೊಸ ಪ್ಲ್ಯಾನ್‌ಗಳು: ₹151 (30 ಜಿಬಿ), ₹201 (40 ಜಿಬಿ), ₹251 (50ಜಿಬಿ).ಹೊಸ ಪ್ಲಾನ್‌ನಲ್ಲಿ ಪ್ರತಿ ಜಿಬಿಯ ಸರಾಸರಿ ಮೊತ್ತವು ₹ 5 ಆಗಲಿದೆ.ಹಾಲಿ ಇರುವ ಟಾಪ್‌–ಅಪ್‌ ಪ್ಲಾನ್‌ಗಳಲ್ಲಿ ಡೇಟಾ ದರವು ಪ್ರತಿ ಜಿಬಿಗೆ ₹ 8.5 ರಿಂದ ₹21ರವರೆ ಇದೆ ಎಂದು ಹೇಳಿದೆ.

ADVERTISEMENT

ವರ್ಷದ ಪ್ಲಾನ್‌ನಲ್ಲಿಯೂ ಪರಿಷ್ಕರಣೆ ಮಾಡಿದ್ದು, ₹2,399ಕ್ಕೆ ದಿನದ ಡೇಟಾ ಬಳಕೆ ಮಿತಿಯನ್ನು 2ಜಿಬಿಗೆ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.