ADVERTISEMENT

ಐಪಿಒಗೆ ಕರಡು ದಾಖಲೆ ಪ‍ತ್ರ ಸಲ್ಲಿಸಿದ ಜೋಯಾಲುಕ್ಕಾಸ್

ಪಿಟಿಐ
Published 28 ಮಾರ್ಚ್ 2022, 11:33 IST
Last Updated 28 ಮಾರ್ಚ್ 2022, 11:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚಿನ್ನಾಭರಣ ಕಂಪನಿ ಜೋಯಾಲುಕ್ಕಾಸ್ ಇಂಡಿಯಾ ಲಿಮಿಟೆಡ್‌, ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹ 2,300 ಕೋಟಿ ಬಂಡವಾಳ ಸಂಗ್ರಹಿಸಲು ಉದ್ದೇಶಿಸಿದ್ದು, ಅದಕ್ಕಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಕರಡು ದಾಖಲೆ ಪತ್ರಗಳನ್ನು ಸಲ್ಲಿಸಿದೆ.

ಐಪಿಒದಲ್ಲಿ ಹೊಸ ಷೇರುಗಳು ಇರಲಿವೆ. ಆದರೆ ಆಫರ್‌ ಫರ್‌ ಸೇಲ್‌ (ಒಎಫ್‌ಎಸ್‌) ಇರುವುದಿಲ್ಲ ಎನ್ನುವ ಮಾಹಿತಿಯು ಕರಡು ದಾಖಲೆ ಪತ್ರದಲ್ಲಿ ಇದೆ.

ಐಪಿಒ ಮೂಲಕ ಸಂಗ್ರಹ ಆಗಲಿರುವ ಮೊತ್ತದಲ್ಲಿ ₹ 1,400 ಕೋಟಿಯನ್ನು ಸಾಲ ಮರುಪಾವತಿಗೆ ಹಾಗೂ ₹ 463.90 ಕೋಟಿಯನ್ನು ಎಂಟು ಮಳಿಗೆಗಳನ್ನು ತೆರೆಯಲು ಬಳಸಲಾಗುವುದು. ಉಳಿದ ಮೊತ್ತವನ್ನು ಇತರ ಕಾರ್ಪೊರೇಟ್‌ ಉದ್ದೇಶಗಳಿಗೆ ಬಳಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ADVERTISEMENT

ಕಂಪನಿಯು ಎರಡು ವರ್ಷಗಳಲ್ಲಿ ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಒಟ್ಟಾರೆ ಎಂಟು ಮಳಿಗೆಗಳನ್ನು ತೆರೆಯುವ ಯೋಜನೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.