ADVERTISEMENT

ಪೇಂಟ್ಸ್‌ ಉದ್ಯಮಕ್ಕೆ ಜೆಎಸ್‌ಡಬ್ಲ್ಯು

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 16:58 IST
Last Updated 11 ಜೂನ್ 2019, 16:58 IST
ಜೆಎಸ್‌ಡಬ್ಲ್ಯು ಪೇಂಟ್‌ ಉತ್ಪನ್ನಗಳೊಂದಿಗೆ ಸಿಇಒ ಎ.ಎಸ್‌. ಸುಂದರೇಶನ್‌
ಜೆಎಸ್‌ಡಬ್ಲ್ಯು ಪೇಂಟ್‌ ಉತ್ಪನ್ನಗಳೊಂದಿಗೆ ಸಿಇಒ ಎ.ಎಸ್‌. ಸುಂದರೇಶನ್‌   

ಬೆಂಗಳೂರು:ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಜೆಎಸ್‌ಡಬ್ಲ್ಯು ಸಮೂಹವು ಕರ್ನಾಟಕದ ಮಾರುಕಟ್ಟೆಯ ಮೂಲಕಪೇಂಟ್ಸ್‌ ಉದ್ಯಮಕ್ಕೆ ಕಾಲಿಟ್ಟಿದೆ.

‘ಸದ್ಯಕ್ಕೆ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಪೇಂಟ್ಸ್‌ ಮಾರಾಟ ಆರಂಭವಾಗಿದೆ. ಕ್ರಮೇಣ ಬೇರೆ ನಗರಗಳಿಗೆ ಮತ್ತು ಇತರ ರಾಜ್ಯಗಳಿಗೂ ವಿಸ್ತರಣೆ ಮಾಡಲಾಗುವುದು’ ಎಂದು ಜೆಎಸ್‌ಡಬ್ಲ್ಯು ಪೇಂಟ್ಸ್‌ನ ಸಿಇಒ ಎ.ಎಸ್‌. ಸುಂದರೇಶನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದೇ ದರ: ‘ಸದ್ಯಕ್ಕೆ ಇತರ ಕಂಪನಿಗಳ ಬಿಳಿಯ ಬಣ್ಣ ಅಲ್ಲದೆ ಬೇರೆ ಬಣ್ಣಗಳನ್ನು ಆಯ್ಕೆ ಮಾಡಿಕೊಂಡರೆ ಅದಕ್ಕೆ ಹೆಚ್ಚಿನ ದರ ನೀಡಬೇಕು. ಆದರೆ, ಜೆಎಸ್‌ಡಬ್ಲ್ಯು ಪೇಂಟ್ಸ್‌ನಯಾವುದೇ ಬಣ್ಣದ ಪೇಂಟ್ಸ್ ಖರೀದಿಸಿದರೂ ಒಂದೇ ದರ ಇರಲಿದೆ.

ADVERTISEMENT

‘ಒಂದು ಲೀಟರಿಗೆ ₹ 477 ದರ ನಿಗದಿ ಮಾಡಲಾಗಿದೆ. ದರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಪೇಂಟ್‌ ಉದ್ಯಮದಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ’ ಎಂದು ಹೇಳಿದರು.

‘ಪರಿಸರ ಮತ್ತು ಗ್ರಾಹಕರ ಸ್ನೇಹಿಯಾಗುವ ನಿಟ್ಟಿನಲ್ಲಿ ಹಲವು ಹೊಸತನಗಳನ್ನು ಅಳವಡಿಸಿಕೊಂಡಿದ್ದೇವೆ. ಪೇಂಟ್‌ ರೋಲರ್‌ ಬಳಸಲು ಅನುಕೂಲ ಆಗುವಂತೆ ಡಬ್ಬಿಗಳನ್ನು ಆಯತಾಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ’ ಎಂದು ಅವರು ವಿವರಿಸಿದರು.

ಗ್ರಾಹಕರಿಗೆ ನೈಜ ಅನುಭವ ನೀಡಲು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ‘ಕಲರ್‌ವಿಸ್ಟಾ ಸೆನ್ಸ್‌' ಎಂಬ ರಿಟೇಲ್‌ ಎಕ್ಸ್‌ಪೀರಿಯನ್ಸ್‌ ಮಳಿಗೆ ತೆರೆಯಲಾಗಿದೆ. ಗ್ರಾಹರಿಗೆ ಉತ್ಪನ್ನಗಳನ್ನು ಆಯ್ಕೆ ಮಾಡಲು ಅಗತ್ಯವಾದ ಸಲಹೆಗಳು ಇಲ್ಲಿ ಸಿಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.