ADVERTISEMENT

ಚೇತರಿಕೆಯತ್ತ ರಫ್ತು ವಹಿವಾಟು : ಸಚಿವ ಪೀಯೂಷ್‌ ಗೋಯಲ್‌

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌

ಪಿಟಿಐ
Published 4 ಆಗಸ್ಟ್ 2020, 13:45 IST
Last Updated 4 ಆಗಸ್ಟ್ 2020, 13:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ದೇಶದ ರಪ್ತು ವಹಿವಾಟು ಸುಧಾರಿಸಿಕೊಳ್ಳುವ ಸೂಚನೆ ಕಂಡುಬರುತ್ತಿದೆ. ಜುಲೈನಲ್ಲಿ ಆಗಿರುವ ರಫ್ತು ಹಿಂದಿನ ವರ್ಷದ ಜುಲೈನ ಮಟ್ಟಕ್ಕೆ ಬಹುತೇಕ ತಲುಪಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

‘2019ರ ಜುಲೈನಲ್ಲಿ ಆಗಿದ್ದ ರಫ್ತಿಗೆ ಹೋಲಿಸಿದರೆ 2020ರ ಜುಲೈನ ರಫ್ತು ಶೇ 90ರಷ್ಟಾಗಿದೆ. ತೈಲಕ್ಕೆ ಸಂಬಂದಿಸಿದ ರಫ್ತನ್ನೂ ಸೇರಿಸಿದರೆ ಅದು ಶೇ 95ರಷ್ಟಕ್ಕೂ ಹೆಚ್ಚಾಗಲಿದೆ’ ಎಂದು ತಿಳಿಸಿದ್ದಾರೆ.

ಸಚಿವಾಲಯವು ಈ ತಿಂಗಳ ಮಧ್ಯಭಾಗದಲ್ಲಿಅಧಿಕೃತ ಅಂಕಿ–ಅಂಶವನ್ನು ಬಿಡುಗಡೆ ಮಾಡಲಿದೆ. ‘ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ ಎನ್ನುವುದನ್ನು ಹಲವು ಅಂಶಗಳು ಸೂಚಿಸುತ್ತಿವೆ. ಆರ್ಥಿಕ ಚಟುವಟಿಕೆಗಳನ್ನು ಸಹಜ ಸ್ಥಿತಿಗೆ ತರುವುದಷ್ಟೇ ಅಲ್ಲದೆ, ಸ್ವಾವಲಂಬನೆ, ಉತ್ಪನ್ನಗಳ ಗುಣಮಟ್ಟದಲ್ಲಿ ಸುಧಾರಣೆ ಮತ್ತು ಸ್ಪರ್ಧಾತ್ಮಕ ದರ ನಿಗದಿ ಮಾಡುವುದರತ್ತವೂ ದೇಶವು ಮುನ್ನಡೆಯುತ್ತಿದೆ’ ಎಂದು ಗೋಯಲ್‌ ಹೇಳಿದ್ದಾರೆ.

ADVERTISEMENT

ಮಾರ್ಚ್‌ನಿಂದ ಜೂನ್‌ವರೆಗೆ ನಿರಂತರವಾಗಿ ನಾಲ್ಕು ತಿಂಗಳಿನಲ್ಲಿ ರಫ್ತು ವಹಿವಾಟು ಇಳಿಕೆ ಕಂಡಿದೆ. ಪೆಟ್ರೋಲಿಯಂ ಮತ್ತು ಜವಳಿ ಉತ್ಪನ್ನಗಳ ರಫ್ತು ಕಡಿಮೆಯಾಗಿದ್ದೇ ಜೂನ್‌ನಲ್ಲಿ ರಫ್ತು ಇಳಿಕೆಯಾಗಲು ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.