ಮುಂಬೈ: ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾದ ಬ್ರ್ಯಾಂಡ್ ಆದ ‘ಕ್ಯಾಂಡರೆ’ಗೆ ಬಾಲಿವುಡ್ ನಟ ಶಾರುಕ್ ಖಾನ್ ಅವರು, ಪ್ರಚಾರ ರಾಯಭಾರಿಯಾಗಿದ್ದಾರೆ.
ಭಾರತೀಯರು ತಮ್ಮ ವ್ಯಕ್ತಿತ್ವ, ಜೀವನ ಶೈಲಿ ಹಾಗೂ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಧರಿಸಲು ಆಕರ್ಷಕ ಆಭರಣಗಳಿಗೆ ಹುಡುಕಾಟ ನಡೆಸುತ್ತಾರೆ. ಇದಕ್ಕೆ ಪೂರಕವಾಗಿ ಕ್ಯಾಂಡರೆಯು ಆಭರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಜೆನ್ ಝೀ ತಲೆಮಾರಿನವರ ಬೇಡಿಕೆ ಈಡೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಕ್ಯಾಂಡರೆ ನಿರ್ದೆಶಕ ರಮೇಶ್ ಕಲ್ಯಾಣರಾಮನ್ ತಿಳಿಸಿದ್ದಾರೆ.
ನಟ ಶಾರುಕ್ ಖಾನ್ ಪ್ರಚಾರ ರಾಯಭಾರಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.