ADVERTISEMENT

ಐಬಿಎಂ ಜೊತೆ ಕರ್ಣಾಟಕ ಬ್ಯಾಂಕ್ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 16:03 IST
Last Updated 3 ಡಿಸೆಂಬರ್ 2025, 16:03 IST
ಕರ್ಣಾಟಕ ಬ್ಯಾಂಕ್
ಕರ್ಣಾಟಕ ಬ್ಯಾಂಕ್   

ಬೆಂಗಳೂರು: ಕರ್ಣಾಟಕ ಬ್ಯಾಂಕ್‌ ಲಿಮಿಟೆಡ್‌ ತನ್ನ ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಆಧುನೀಕರಣಕ್ಕೆ ಐಬಿಎಂ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಇದರಿಂದ ಬ್ಯಾಂಕ್‌ಗೆ ಸುರಕ್ಷಿತವಾದ, ಅಭಿವೃದ್ಧಿಪಡಿಸಬಹುದಾದ ಮತ್ತು ಹೊಂದಿಕೊಳ್ಳಬಲ್ಲ ಎಪಿಐ (ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್) ವೇದಿಕೆ ಸಿದ್ಧವಾಗಿದೆ. ಇದು ಬ್ಯಾಂಕ್‌ನ ಡಿಜಿಟಲ್‌ ಮೂಲಸೌಕರ್ಯವನ್ನು ಬಲಪಡಿಸುವುದರ ಜೊತೆಗೆ ಕಾರ್ಯಾಚರಣೆ ವೆಚ್ಚವನ್ನು ಕಡಿಮೆ ಮಾಡಿದೆ ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

ಈ ವೇದಿಕೆಯಿಂದ ಡಿಜಿಟಲ್‌ ಪಾವತಿ, ಸಾಲ ಪ್ರಕ್ರಿಯೆಯಂತಹ ಸೇವೆಗಳನ್ನು ಬಹಳ ವೇಗವಾಗಿ ಒದಗಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ‘ಇದು ಬ್ಯಾಂಕ್‌ನ ಡಿಜಿಟಲ್ ಪಯಣದಲ್ಲಿ ಬಹುದೊಡ್ಡ ಮೈಲುಗಲ್ಲು. ಇದರಿಂದ ದೇಶದಾದ್ಯಂತ ಬ್ಯಾಂಕ್‌ನ ಕಾರ್ಯಾಚರಣೆ  ವಿಸ್ತರಿಸುವುದು, ಖರ್ಚು ಕಡಿಮೆ ಮಾಡುವುದು ಸಾಧ್ಯವಾಗಲಿದೆ’ ಎಂದು ಬ್ಯಾಂಕ್‌ನ ಮುಖ್ಯ ಮಾಹಿತಿ ಅಧಿಕಾರಿ ವೆಂಕಟ್ ಕೃಷ್ಣನ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.