ADVERTISEMENT

ಕರ್ಣಾಟಕ ಬ್ಯಾಂಕ್‌ ಪ್ರಿಪೇಯ್ಡ್ ಕಾರ್ಡ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 17:54 IST
Last Updated 9 ನವೆಂಬರ್ 2020, 17:54 IST
ಮಂಗಳೂರಿನಲ್ಲಿ ಸೋಮವಾರ ಎನ್‌ಸಿಎಂಸಿ ಅನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್‌. ಬಿಡುಗಡೆ ಮಾಡಿದರು.
ಮಂಗಳೂರಿನಲ್ಲಿ ಸೋಮವಾರ ಎನ್‌ಸಿಎಂಸಿ ಅನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್‌. ಬಿಡುಗಡೆ ಮಾಡಿದರು.   

ಮಂಗಳೂರು: ಕೇಂದ್ರ ಸರ್ಕಾರದ ಆಶಯದಂತೆ ‘ನ್ಯಾಷನಲ್ ಕಾಮನ್ ಮೊಬಿಲಿಟಿ ಡೆಬಿಟ್ ಕಾರ್ಡ್’ಅನ್ನು (ಎನ್‌ಸಿಎಂಸಿ) ಕರ್ಣಾಟಕ ಬ್ಯಾಂಕ್ ಸೋಮವಾರ ಬಿಡುಗಡೆ ಮಾಡಿದೆ.

ಇದು ಜಗತ್ತಿನಾದ್ಯಂತ ಬಳಸಬಹುದಾದ ಸ್ಪರ್ಶ ರಹಿತ, ಡೆಬಿಟ್ ಅಥವಾ ಪ್ರಿಪೇಯ್ಡ್ ಕಾರ್ಡ್. ‘ಒಂದು ದೇಶ, ಒಂದು ಕಾರ್ಡ್’ ಎನ್ನುವ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ರೂಪುಗೊಂಡಿರುವ ಈ ಕಾರ್ಡನ್ನು ಸ್ವೈಪ್ ಮಾಡದೇ ಬಳಸಬಹುದು.ಟೋಲ್ ಪ್ಲಾಜಾ, ಮೆಟ್ರೋ ನಿಲ್ದಾಣ, ಪಾರ್ಕಿಂಗ್ ಜಾಗಗಳಲ್ಲಿ, ಮಳಿಗೆಗಳಲ್ಲಿ ಬಳಸಬಹುದು. ಚಿಪ್ ಆಧಾರಿತ ಈ ಕಾರ್ಡ್ ಬಳಸಿ ಇಂಟರ್‌ನೆಟ್ ಬಳಕೆ ಇಲ್ಲದೆಯೇ ಸಣ್ಣಪುಟ್ಟ ವ್ಯವಹಾರಗಳನ್ನು ಮಾಡಬಹುದು.

ಕಾರ್ಡ್ ಬಿಡುಗಡೆ ಮಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್., ‘ಬದಲಾಗುತ್ತಿರುವ ಬ್ಯಾಂಕಿಂಗ್ ಪರಿಭಾಷೆಗೆ ಈ ಕಾರ್ಡ್‌ ಪೂರಕವಾಗಿದೆ. ಈ ಡೆಬಿಟ್ ಕಾರ್ಡ್‌ನ ಸೌಲಭ್ಯಗಳಾದ ‘ಟ್ಯಾಪ್ ಆಂಡ್ ಗೋ’ ಮತ್ತು ‘ಆಫ್‌ಲೈನ್ ಪೇಮೆಂಟ್’ನಂತಹ ಸೌಲಭ್ಯಗಳು ಜನರಿಗೆ ಆಕರ್ಷಕ ಎನಿಸುತ್ತವೆ. ನೂತನ ಉಪಕ್ರಮಗಳು ಬ್ಯಾಂಕಿಂಗ್ ವ್ಯವಹಾರದ ಪರಿಪೂರ್ಣ ಡಿಜಿಟಲೀಕರಣಕ್ಕೆ ಪೂರಕವಾಗಲಿವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.