ADVERTISEMENT

ಕೈಗಾರಿಕಾ ನೀತಿ: 1.2 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ

ಪಿಟಿಐ
Published 20 ಸೆಪ್ಟೆಂಬರ್ 2020, 20:04 IST
Last Updated 20 ಸೆಪ್ಟೆಂಬರ್ 2020, 20:04 IST
   

ನವದೆಹಲಿ: ಕರ್ನಾಟಕ ರೂಪಿಸಿರುವ ಹೊಸ ಕೈಗಾರಿಕಾ ನೀತಿಯು ರಾಜ್ಯದಲ್ಲಿ ಮೊಬೈಲ್‌ ಫೋನ್‌ ತಯಾರಿಕೆಯಿಂದಾಗುವ ವಹಿವಾಟಿನ ಮೊತ್ತವನ್ನು 2023ರ ವೇಳೆಗೆ ₹ 30 ಸಾವಿರ ಕೋಟಿಗೆ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ಐಸಿಇಎ ಹೇಳಿದೆ. ಅಲ್ಲದೆ, ಇದರಿಂದ ಒಟ್ಟು 1.2 ಲಕ್ಷ ಉದ್ಯೋಗ ಸೃಷ್ಟಿಯಾಗಬಹುದು ಎಂದೂ ಅದು ಅಂದಾಜಿಸಿದೆ.

ಕರ್ನಾಟಕವು ಹೊಸ ಕೈಗಾರಿಕಾ ನೀತಿಯನ್ನು ಆಗಸ್ಟ್‌ನಲ್ಲಿ ಪ್ರಕಟಿಸಿದೆ. ಮೊಬೈಲ್‌ ಫೋನ್‌ ತಯಾರಿಕೆಗೆ ಉತ್ತೇಜನ ನೀಡುವ ಅವಕಾಶ ಈ ನೀತಿಯಲ್ಲಿದೆ. ‘ರಾಜ್ಯ ಸರ್ಕಾರದ ಉತ್ತೇಜನ ಕ್ರಮಗಳು ಎಲೆಕ್ಟ್ರಾನಿಕ್ಸ್ ಸಿಸ್ಟಂ ವಿನ್ಯಾಸ ಮತ್ತು ತಯಾರಿಕಾ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗುತ್ತವೆ. ಮೊಬೈಲ್‌ ತಯಾರಿಕೆಯಲ್ಲಿ ಈಗ ಕರ್ನಾಟಕದ ಪಾಲು ಶೇ 1.5ರಷ್ಟಿದೆ. ಇದು 2023ರೊಳಗೆ ಶೇ 7ಕ್ಕೆ ಹೆಚ್ಚಳ ಆಗಲಿದೆ’ ಎಂದು ‘ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್‌ ಅಸೋಸಿಯೇಷನ್’ (ಐಸಿಇಎ) ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದರು.

ಕರ್ನಾಟಕ ರೂಪಿಸಿರುವ ಹೊಸ ಕೈಗಾರಿಕಾ ನೀತಿಯು ದೂರದೃಷ್ಟಿ ಹೊಂದಿದೆ. ಕಾರ್ಮಿಕ ಸುಧಾರಣೆಗೆ ಸಂಬಂಧಿಸಿದ ಹಲವು ಅಂಶಗಳನ್ನು ಕೂಡ ಅದು ಒಳಗೊಂಡಿದೆ. ಇಂತಹ ಕ್ರಮಗಳಿಂದಾಗಿ ಕರ್ನಾಟಕವು ಸುಲಲಿತವಾಗಿ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ಕಲ್ಪಿಸುವ ರಾಜ್ಯಗಳ ಸಾಲಿನಲ್ಲಿ ಮುಂಚೂಣಿ ಸ್ಥಾನಕ್ಕೆ ಬರಲಿದೆ ಎಂದು ಐಸಿಇಎ ಕಾರ್ಮಿಕ ಮತ್ತು ಮಾನವ ಸಂಪನ್ಮೂಲ ಸಮಿತಿಯ ಅಧ್ಯಕ್ಷ ಸುದಿಪ್ತೊ ಗುಪ್ತ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.