ADVERTISEMENT

ಕೇರಳ ಬ್ಯಾಂಕ್‌ ಸ್ಥಾಪನೆ ಹಾದಿ ಸುಗಮ; ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳು ವಜಾ

ಅರ್ಜಿಗಳನ್ನು ವಜಾ ಮಾಡಿದ ಹೈಕೋರ್ಟ್‌

ಪಿಟಿಐ
Published 30 ನವೆಂಬರ್ 2019, 13:19 IST
Last Updated 30 ನವೆಂಬರ್ 2019, 13:19 IST
ಸ್ಥಾಪನೆಯಾಗಲಿದೆ ಕೇರಳ ಬ್ಯಾಂಕ್‌
ಸ್ಥಾಪನೆಯಾಗಲಿದೆ ಕೇರಳ ಬ್ಯಾಂಕ್‌   

ತಿರುವನಂತಪುರ: ತನ್ನದೇ ಆದಬ್ಯಾಂಕ್‌ ಸ್ಥಾಪಿಸುವಕೇರಳಸರ್ಕಾರದ ಬಹುದಿನಗಳ ಕನಸು ಶೀಘ್ರದಲ್ಲೇ ಈಡೇರಲಿದೆ.ಬ್ಯಾಂಕ್‌ ಸ್ಥಾಪನೆಗೆ ವಿರೋಧಿಸಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನೂ ಹೈಕೋರ್ಟ್‌ ವಜಾ ಮಾಡಿದೆ.

‘ಕೇರಳ ಬ್ಯಾಂಕ್‌ ಸ್ಥಾಪನೆಯಿಂದ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಲಿವೆ’ ಎಂದು ಸಹಕಾರಿ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಅವರು ಹೇಳಿದ್ದಾರೆ.

‘ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದ್ದು, ರಾಜ್ಯದಲ್ಲಿ ಬ್ಯಾಂಕಿಂಗ್‌ ವಲಯದ ದಿಕ್ಕನ್ನು ಬದಲಿಸುವ ನಂಬಿಕೆ ಇದೆ.ಬ್ಯಾಂಕ್‌ ಸ್ಥಾಪನೆ ಮಾಡುವ ಕುರಿತು ಅಧಿಸೂಚನೆ ಹೊರಡಿಸಲಾಗಿದೆ’ ಎಂದಿದ್ದಾರೆ.

ADVERTISEMENT

‘ಕೇರಳ ಬ್ಯಾಂಕ್‌ ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ. 13 ಡಿಸಿಬಿಗಳನ್ನು ಕೇರಳ ರಾಜ್ಯ ಸಹಕಾರ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲು ಸೂಚಿಸಲಾಗಿದೆ’ ಎಂದು ಪಿಣರಾಯಿ ವಿಜಯನ್‌ ಟ್ವೀಟ್‌ ಮಾಡಿದ್ದಾರೆ.

ಜಿಲ್ಲಾ ಸಹಕಾರಿಬ್ಯಾಂಕ್‌ಗಳನ್ನು (ಡಿಸಿಬಿ)ಕೇರಳರಾಜ್ಯ ಸಹಕಾರಬ್ಯಾಂಕ್‌ನಲ್ಲಿ ವಿಲೀನಗೊಳಿಸಿ, ‘ಕೇರಳಬ್ಯಾಂಕ್‌’ ಸ್ಥಾಪಿಸುವುದಕ್ಕೆ ಭಾರತೀಯ ರಿಸರ್ವ್‌ಬ್ಯಾಂಕ್‌ ಒಪ್ಪಿಗೆ ನೀಡಿದೆ.

ಉದ್ದೇಶಿತಕೇರಳಬ್ಯಾಂಕ್‌ ಅಸ್ತಿತ್ವಕ್ಕೆ ಬಂದರೆ, ಅದು ರಾಜ್ಯದಲ್ಲಿ ಅತಿ ದೊಡ್ಡ ಬ್ಯಾಂಕಿಂಗ್‌ ಜಾಲ ಹೊಂದಿದಬ್ಯಾಂಕ್ಆಗಲಿದೆ.

ಯುಡಿಎಫ್‌ ನಿಯಂತ್ರಣದಲ್ಲಿರುವ ಮಲಪ್ಪುರಂ ಜಿಲ್ಲೆಯಲ್ಲಿರುವ ಡಿಸಿಬಿ ಹೊರತುಪಡಿಸಿ ಉಳಿದೆಲ್ಲಾ ಬ್ಯಾಂಕ್‌ಗಳು ವಿಲೀನಕ್ಕೆ ಒಪ್ಪಿಗೆ ಸೂಚಿಸಿವೆ.

ಇದರಿಂದ ಸಹಕಾರಿ ವಲಯದ ಬಲವರ್ಧನೆ ಆಗಲಿದೆ ಇದು ಹೊಂದಿದೆ ಎನ್ನುವುದು ಸರ್ಕಾರದ ವಾದ. ಆದರೆ, ಸಾಂಪ್ರದಾಯಿಕವಾದ ಸಹಕಾರಿ ವಲಯ ನಾಶವಾಗಲಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.