ADVERTISEMENT

ಮೂಲಸೌಕರ್ಯ ವಲಯದ ಬೆಳವಣಿಗೆ ಇಳಿಕೆ

ಪಿಟಿಐ
Published 30 ಆಗಸ್ಟ್ 2024, 14:36 IST
Last Updated 30 ಆಗಸ್ಟ್ 2024, 14:36 IST
...
...   

ನವದೆಹಲಿ: ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿನ ಇಳಿಕೆಯಿಂದ ದೇಶದ ಪ್ರಮುಖ ಎಂಟು ಮೂಲಸೌಕರ್ಯ ವಲಯಗಳ ಬೆಳವಣಿಗೆ ಜುಲೈನಲ್ಲಿ ಇಳಿಕೆ ಕಂಡಿದ್ದು, ಶೇ 6.1ರಷ್ಟಾಗಿದೆ ಎಂದು ಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ.

ಆದರೂ, ಬೆಳವಣಿಗೆ ದರವು ಜೂನ್‌ನಲ್ಲಿದ್ದ ಶೇ 5.1ಕ್ಕಿಂತ ಹೆಚ್ಚಿದೆ. 2023ರ ಜುಲೈನಲ್ಲಿ ಶೇ 8.5ರಷ್ಟು ಬೆಳವಣಿಗೆ ದಾಖಲಾಗಿತ್ತು. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ ಈ ಎಂಟು ವಲಯಗಳಾಗಿವೆ.

ಏಪ್ರಿಲ್‌–ಜುಲೈ ಅವಧಿಯಲ್ಲಿ ಈ ವಲಯಗಳ ಉತ್ಪಾದನೆ ಶೇ 6.1ರಷ್ಟು ಆಗಿದ್ದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 6.6 ದಾಖಲಾಗಿತ್ತು. ಈ ವಲಯಗಳು ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಶೇ 40ರಷ್ಟು ಕೊಡುಗೆ ನೀಡುತ್ತವೆ.

ADVERTISEMENT

ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯು ಕ್ರಮವಾಗಿ (–) ಶೇ 2.9 ಮತ್ತು (–) ಶೇ 1.3ರಷ್ಟು ಕಡಿಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.