ADVERTISEMENT

ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಸಾಲ ಉತ್ಸವ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 16:00 IST
Last Updated 22 ಅಕ್ಟೋಬರ್ 2019, 16:00 IST
ಅಂಬುಜ್ ಚಂದ್ನಾ
ಅಂಬುಜ್ ಚಂದ್ನಾ   

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮಾಚರಣೆ ಹೆಚ್ಚಿಸಲು ಕೋಟಕ್‌ ಮಹೀಂದ್ರಾ ಗ್ರೂಪ್‌, ಆಕರ್ಷಕ ಬಡ್ಡಿ ದರ ಮತ್ತು ಇತರ ಹಲವು ಆಕರ್ಷಕ ಕೊಡುಗೆಗಳ ‘ಕೋನಾ ಕೋನಾ ಖ್ವಾಬ್‌ ಲೋನ್‌ ಉತ್ಸವ’ ಹೆಸರಿನ ವಿಶೇಷ ಸಾಲ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿ ಕನಸಿನ ಸಾಲದ ಉತ್ಸವ ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಂದಗತಿಯ ಆರ್ಥಿಕತೆಗೆ ಚೇತರಿಕೆ ನೀಡಲು ತುಂಬ ಅಗತ್ಯವಾಗಿರುವ ಗ್ರಾಹಕರ ಬೇಡಿಕೆ ಹೆಚ್ಚಿಸಲು ಈ ಸಾಲ ಉತ್ಸವ ಹಮ್ಮಿಕೊಳ್ಳಲಾಗಿದೆ. ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರಿಗೆ ಈ ಉತ್ಸವದ ಸಂದರ್ಭದಲ್ಲಿ ಕಡಿಮೆ ದರದ ಬಡ್ಡಿ ದರದಲ್ಲಿ ಸಾಲ ನೀಡಲು ಉದ್ದೇಶಿಸಲಾಗಿದೆ.

‘ಕಾರ್‌, ಬೈಕ್‌, ಟ್ರ್ಯಾಕ್ಟರ್‌, ವಾಣಿಜ್ಯ ವಾಹನ, ಗೃಹ ಖರೀದಿ, ವೈಯಕ್ತಿಕ, ಗೃಹೋಪಯೋಗಿ ಸಲಕರಣೆ, ಕೃಷಿ ವಹಿವಾಟು, ಸಣ್ಣ ಕೈಗಾರಿಕೆಗಳು (ಎಸ್‌ಎಂಇ), ಕಟ್ಟಡ ನಿರ್ಮಾಣ ಸಲಕರಣೆಗಳ ಖರೀದಿ ಉದ್ದೇಶಕ್ಕೆ ಸಾಲಗಳನ್ನು ಸ್ಪರ್ಧಾತ್ಮಕ ದರದ ಬಡ್ಡಿ ದರದಲ್ಲಿ ನೀಡಲಾಗುವುದು. ಜತೆಗೆ ಇತರ ಆಕರ್ಷಕ ಕೊಡುಗೆಗಳು, ತ್ವರಿತ ಮಂಜೂರಾತಿ ಈ ಸಾಲ ಉತ್ಸವದ ವಿಶೇಷತೆಗಳಾಗಿವೆ’ ಎಂದು ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಂಬುಜ್‌ ಚಂದ್ನಾ ಅವರು ಹೇಳಿದ್ದಾರೆ.

ADVERTISEMENT

‘ಡಿಜಿಟಲ್‌ ಉತ್ಪನ್ನಗಳ ಖರೀದಿಗೆ ಸ್ಥಳದಲ್ಲಿಯೇ ಸಾಲ ಮಂಜೂರಾತಿ ಮಾಡುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ದೇಶಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸದ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಗದುತನ ಇದೆ. ದೇಶದಾದ್ಯಂತ ಗ್ರಾಹಕರಿಗೆ ಸುಲಭವಾಗಿ ಸಾಲ ವಿತರಿಸುವುದು ಸದ್ಯದ ಆದ್ಯತೆಯಾಗಿದೆ. ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಈ ನಿಟ್ಟಿನಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಯುವ ಜನತೆಗೂ ಸುಲಭವಾಗಿ ಸಾಲ ದೊರೆಯುವಂತೆ ಬ್ಯಾಂಕ್‌ ಕಾರ್ಯಪ್ರವೃತ್ತವಾಗಿದೆ’ ಎಂದು ಅಂಬುಜ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.