ನವದೆಹಲಿ: ಕೋಟಕ್ ಸಮೂಹದ ಕೋಟಕ್ ಮಹೀಂದ್ರ ಪ್ರೈಮ್ (ಕೆಎಂಪಿಎಲ್) ಟೆಸ್ಲಾ ಕಂಪನಿಯ ವಿದ್ಯುತ್‌ಚಾಲಿತ ವಾಹನಗಳ ಖರೀದಿಗೆ ಸಾಲ ನೀಡಲಿದೆ.
‘ಕೋಟಕ್ ಮಹೀಂದ್ರ ಪ್ರೈಮ್, ಭಾರತದಲ್ಲಿನ ಟೆಸ್ಲಾ ಕಂಪನಿಯ ವಾಹನಗಳಿಗೆ ಸಾಲ ನೀಡಲು ಹಣಕಾಸುದಾರನಾಗಿ ನೇಮಕಗೊಂಡ ಮೊದಲಿಗ’ ಎಂದು ಕಂಪನಿ ತಿಳಿಸಿದೆ.
ಟೆಸ್ಲಾ ಇ.ವಿ ಖರೀದಿದಾರರಿಗೆ ಕೆಎಂಪಿಎಲ್ ವಿಶೇಷವಾಗಿ ಕ್ಯುರೇಟೆಡ್ ಕಾರು ಹಣಕಾಸು ನೆರವು ನೀಡಲಿದೆ. ಖರೀದಿದಾರರು ಟೆಸ್ಲಾದ ಇಂಡಿಯಾ ಪೋರ್ಟಲ್/ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೆಎಂಪಿಎಲ್‌ನ ಸಾಲದ ಆಯ್ಕೆಗಳನ್ನು ಪರಿಶೀಲಿಸಬಹುದಾಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.