ADVERTISEMENT

ಖಾದಿ ಮುಖಗವಸು; ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯ

ಪಿಟಿಐ
Published 8 ಜುಲೈ 2020, 16:42 IST
Last Updated 8 ಜುಲೈ 2020, 16:42 IST
ಖಾದಿ ಮುಖಗವಸು
ಖಾದಿ ಮುಖಗವಸು   

ನವದೆಹಲಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆವಿಐಸಿ) ತಯಾರಿಸಿರುವ ಹತ್ತಿ ಮತ್ತು ರೇಷ್ಮೆಯ ಬಟ್ಟೆಯ ಮುಖಗವಸುಗಳನ್ನು ಗ್ರಾಹಕರು ಈಗ ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಖಾದಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಲು ಸಾಧ್ಯವಾಗದವರ ಅನುಕೂಲಕ್ಕಾಗಿ ಈ ಮುಖಗವಸುಗಳು ಆಯೋಗದ ಆನ್‌ಲೈನ್‌ ತಾಣದಲ್ಲಿ (https://www.kviconline.gov.in/khadimask ) ಖರೀದಿಗೆ ಲಭ್ಯ ಇವೆ.

‘ಹತ್ತಿ ಬಟ್ಟೆಯ ಪ್ರತಿ ಮುಖಗವಸಿಗೆ ₹ 30 ಮತ್ತು ರೇಷ್ಮೆಯ ಮುಖಗವಸಿಗೆ ₹ 100 ಬೆಲೆ ನಿಗದಿಪಡಿಸಲಾಗಿದೆ. ಕನಿಷ್ಠ ಖರೀದಿ ಮಿತಿಯನ್ನು ₹ 500ಕ್ಕೆ ನಿಗದಿಪಡಿಸಲಾಗಿದೆ. ಖರೀದಿಸಿದ 5 ದಿನಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುವುದು. ದೇಶದ ಯಾವುದೇ ಭಾಗದಲ್ಲಿ ಪೂರೈಸಲಾಗುವುದು. ಪ್ರಿಂಟೆಡ್‌ ರೇಷ್ಮೆ ಸೇರಿ ನಾಲ್ಕು ಬಗೆಯ ಮುಖಗವಸುಗಳು ಮಾರಾಟಕ್ಕೆ ಇವೆ’ ಎಂದು ಆಯೋಗದ ಅಧ್ಯಕ್ಷ ವಿ. ಕೆ. ಸಕ್ಸೇನಾ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.