ಬೆಂಗಳೂರು: ಕೋವಿಡ್–19 ಸಾಂಕ್ರಾಮಿಕದ ಸವಾಲಿನ ಸಂದರ್ಭದ ಹೊರತಾಗಿಯೂ ಹೊಸ ಯೋಜನೆಗಳ ಪ್ರಗತಿಯು ಪರಿಣಾಮಕಾರಿ ಆಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತಿಳಿಸಿದೆ.
2020–21ನೇ ಹಣಕಾಸು ವರ್ಷದಲ್ಲಿ ವೈಯಕ್ತಿಕ ಖಾತರಿ ವಹಿವಾಟಿನಲ್ಲಿ ₹ 56,406 ಕೋಟಿ ಮೊದಲ ವರ್ಷದ ಪ್ರೀಮಿಯಂ ವರಮಾನ ಗಳಿಸಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇಕಡ 10.11ರಷ್ಟು ಬೆಳವಣಿಗೆ ಕಂಡಿದೆ. ಎಲ್‌ಐಸಿಯ ಪಿಂಚಣಿ ಮತ್ತು ಗುಂಪು ಯೋಜನೆಗಳು ಸಹ ₹ 1.27 ಲಕ್ಷ ಕೊಟಿಗಳಷ್ಟು ಹೊಸ ಯೋಜನೆಗಳ ಪ್ರೀಮಿಯಂ ವರಮಾನ ಗಳಿಸಿವೆ. ಒಟ್ಟಾರೆ ಹೊಸ ಪ್ರೀಮಿಯಂ ಮೊತ್ತವು ₹ 1.84 ಲಕ್ಷ ಕೋಟಿಗಳಷ್ಟಾಗಿದೆ.
ಹಣಕಾಸು ವರ್ಷದಲ್ಲಿ ಹೊಸದಾಗಿ 3.45 ಲಕ್ಷ ಏಜೆಂಟರು ಸೇರಿದ್ದು, ಒಟ್ಟಾರೆ ಏಜೆಂಟರ ಸಂಖ್ಯೆಯು 13.53 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.