ADVERTISEMENT

ಎಲ್‌ಐಸಿಯಿಂದ ಜೀವನ್‌ ಆಜಾದ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 22:06 IST
Last Updated 20 ಜನವರಿ 2023, 22:06 IST

ಬೆಂಗಳೂರು: ಎಲ್‌ಐಸಿಯು ಜೀವನ್‌ ಆಜಾದ್‌ ಎನ್ನುವ ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯು ಸುರಕ್ಷತೆಯ ಜೊತೆಗೆ ಉಳಿತಾಯವನ್ನೂ ಒಳಗೊಂಡಿದೆ.

ವಿಮೆ ಮಾಡಿಸಿದವರು ಅಕಾಲಿಕ ಮರಣ ಹೊಂದಿದಲ್ಲಿ ಕುಟುಂಬದವರಿಗೆ ಹಣಕಾಸಿನ ಬೆಂಬಲವನ್ನು ಇದು ನೀಡಲಿದೆ. ವ್ಯಕ್ತಿ ಮೃತಪಟ್ಟಾಗ ಕುಟುಂಬದವರಿಗೆ ಸಿಗುವ ಹಣಕಾಸಿನ ನೆರವು ಒಟ್ಟು ಪ್ರೀಮಿಯಂನ ಶೇ 105ಕ್ಕಿಂತಲೂ ಕಡಿಮೆ ಇರುವಂತಿಲ್ಲ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲವು ನಿರ್ದಿಷ್ಟ ಷರತ್ತುಗಳೊಂದಿಗೆ ಕಂತುಗಳಲ್ಲಿಯೂ ಖಾತರಿ ಮೊತ್ತ ಪಡೆಯಬಹುದು. 15 ವರ್ಷಗಳಿಂದ 20 ವರ್ಷಗಳ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ADVERTISEMENT

ಗರಿಷ್ಠ ಖಾತರಿ ಮೊತ್ತವು ₹ 5 ಲಕ್ಷ ಇರಲಿದೆ. ಪ್ರೀಮಿಯಂ ಅನ್ನು ವರ್ಷಕ್ಕೊಮ್ಮೆ, ಆರು ತಿಂಗಳಿಗೆ, ಮೂರು ತಿಂಗಳಿಗೆ ಅಥವಾ ತಿಂಗಳಿಗೊಮ್ಮೆ ಪಾವತಿಸಬಹುದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.