ADVERTISEMENT

ಏಜೆಂಟ್‌ಗಳಿಗೆ ‘ಆನಂದ’ ಆ್ಯಪ್‌ ಬಿಡುಗಡೆ ಮಾಡಿದ ಎಲ್‌ಐಸಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 14:34 IST
Last Updated 26 ಆಗಸ್ಟ್ 2021, 14:34 IST
ಎಲ್‌ಐಸಿಯ ಅಧ್ಯಕ್ಷ ಎಂ.ಆರ್‌. ಕುಮಾರ್‌ ಅವರು ಆನಂದ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದರು. ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಕುಮಾರ್ ಗುಪ್ತಾ, ರಾಜ್ ಕುಮಾರ್‌, ಸಿದ್ದಾರ್ಥ ಮೊಹಂತಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಇದ್ದರು
ಎಲ್‌ಐಸಿಯ ಅಧ್ಯಕ್ಷ ಎಂ.ಆರ್‌. ಕುಮಾರ್‌ ಅವರು ಆನಂದ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದರು. ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಕುಮಾರ್ ಗುಪ್ತಾ, ರಾಜ್ ಕುಮಾರ್‌, ಸಿದ್ದಾರ್ಥ ಮೊಹಂತಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಇದ್ದರು   

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು ತನ್ನ ಹೊಸ ವಹಿವಾಟನ್ನು ಡಿಜಿಟಲೀಕರಣಗೊಳಿಸುವ ಭಾಗವಾಗಿ ಏಜೆಂಟ್‌ಗಳು ಮತ್ತು ಮಧ್ಯವರ್ತಿಗಳಿಗೆ ‘ಆತ್ಮನಿರ್ಭರ ಭಾರತ ನ್ಯೂ ಬಿಸಿನೆಸ್‌ ಡಿಜಿಟಲ್‌ ಅಪ್ಲಿಕೇಷನ್‌’ (ಆನಂದ ಆ್ಯಪ್‌) ಬಿಡುಗಡೆ ಮಾಡಿದೆ.

ಈ ಆ್ಯಪ್‌ಅನ್ನು ಏಜೆಂಟ್‌ಗಳು, ಮಧ್ಯವರ್ತಿಗಳು ಬಳಸುವುದು ಹೆಚ್ಚಲಿದೆ ಎಂಬ ನಿರೀಕ್ಷೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಎಲ್‌ಐಸಿಯ ಅಧ್ಯಕ್ಷ ಎಂ.ಆರ್‌. ಕುಮಾರ್‌ ಅವರು ಆ್ಯಪ್‌ ಅನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಏಜೆಂಟ್‌ಗಳಿಗಾಗಿ ಇ-ತರಬೇತಿ ವೀಡಿಯೊ ಬಿಡುಗಡೆ ಮಾಡಲಾಯಿತು. ಮೊಬೈಲ್ ಆ್ಯಪ್‌ನ ಪ್ರಮುಖ ಲಕ್ಷಣಗಳನ್ನು ಮತ್ತು ಜೀವವಿಮಾ ಪಾಲಿಸಿಯನ್ನು ಪೂರ್ಣಗೊಳಿಸುವ ಪ್ರಕ್ರಿಯೆಯ ಮಾಹಿತಿಯು ಈ ವಿಡಿಯೊದಲ್ಲಿದೆ ಎಂದು ಕಂಪನಿಯು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.