ADVERTISEMENT

ಎಲ್‌ಐಸಿಗೆ ₹10,053 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 16:01 IST
Last Updated 6 ನವೆಂಬರ್ 2025, 16:01 IST
ಎಲ್‌ಐಸಿ
ಎಲ್‌ಐಸಿ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನಿವ್ವಳ ಲಾಭದಲ್ಲಿ ಶೇ 32ರಷ್ಟು ಏರಿಕೆಯಾಗಿದ್ದು, ₹10,053 ಕೋಟಿ ಲಾಭ ಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹7,621 ಕೋಟಿ ಲಾಭ ಆಗಿತ್ತು ಎಂದು ನಿಗಮವು ಷೇರುಪೇಟೆಗೆ ಗುರುವಾರ ತಿಳಿಸಿದೆ.

ಒಟ್ಟು ವರಮಾನವು ₹2.39 ಲಕ್ಷ ಕೋಟಿಯಾಗಿದೆ. ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವರಮಾನವು ₹2.29 ಲಕ್ಷ ಕೋಟಿಯಷ್ಟಿತ್ತು. ಕಂತುಗಳ ಮೂಲಕ ಗಳಿಸಿದ ವರಮಾನವು ₹1.19 ಲಕ್ಷ ಕೋಟಿಯಿಂದ ₹1.26 ಲಕ್ಷ ಕೋಟಿಗೆ ಹೆಚ್ಚಳವಾಗಿದೆ.

ADVERTISEMENT

ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮೊದಲ ವರ್ಷದ ಕಂತು ಮೂಲಕ ₹11,201 ಕೋಟಿ ಗಳಿಸಿತ್ತು. ಈ ಬಾರಿ ಅದು ₹10,836 ಕೋಟಿಗೆ ಇಳಿದಿದೆ.

ಮಾರುಕಟ್ಟೆಯಲ್ಲಿ ಎಲ್‌ಐಸಿ ಪಾಲು ಶೇ 61.07ರಿಂದ ಶೇ 59.41ಕ್ಕೆ ಇಳಿದಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ನಿಗಮದ ಲಾಭವು ಶೇ 16.36ರಷ್ಟು ಹೆಚ್ಚಳವಾಗಿ, ₹21,040 ಕೋಟಿ ಆಗಿದೆ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.