ADVERTISEMENT

ಎಲ್‌ಐಸಿ: ಆರಂಭಿಕ ಹೂಡಿಕೆದಾರರಿಂದ ₹ 5 ಸಾವಿರ ಕೋಟಿ ಹೂಡಿಕೆ

ಪಿಟಿಐ
Published 3 ಮೇ 2022, 14:34 IST
Last Updated 3 ಮೇ 2022, 14:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಆರಂಭಿಕ ಹೂಡಿಕೆದಾರರಿಂದ ₹ 5,627 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಮಂಗಳವಾರ ತಿಳಿಸಿದೆ. ಎಲ್‌ಐಸಿಯ ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮುನ್ನ ಈ ಹೂಡಿಕೆ ಆಗಿದೆ.

ಆರಂಭಿಕ ಹೂಡಿಕೆದಾರರಿಗೆ 5.92 ಕೋಟಿ ಷೇರುಗಳನ್ನು ಮೀಸಲಿಡಲಾಗಿತ್ತು. ಇಷ್ಟು ಷೇರುಗಳ ಪೈಕಿ 4.2 ಕೋಟಿ ಷೇರುಗಳನ್ನು 15 ದೇಶಿ ಮ್ಯೂಚುವಲ್ ಫಂಡ್ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ಒಟ್ಟು 99 ಮ್ಯೂಚುವಲ್ ಫಂಡ್‌ ಯೋಜನೆಗಳು ಎಲ್‌ಐಸಿಯಲ್ಲಿ ಹೂಡಿಕೆ ಮಾಡಲಿವೆ ಎಂದು ಎಲ್‌ಐಸಿ ತಿಳಿಸಿದೆ.

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಶುರೆನ್ಸ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಕೋಟಕ್ ಮಹೀಂದ್ರ ಲೈಫ್ ಇನ್ಶುರೆನ್ಸ್ ಸೇರಿದಂತೆ ಕೆಲವು ದೇಶಿ ವಿಮಾ ಕಂಪನಿಗಳು ಹಾಗೂ ಪಿಂಚಣಿ ನಿಧಿಗಳು ಕೂಡ ಎಲ್‌ಐಸಿಯಲ್ಲಿ ಹೂಡಿಕೆ ಮಾಡಿವೆ. ಸಿಂಗಪುರ ಸರ್ಕಾರ, ಸಿಂಗಪುರ ಹಣಕಾಸು ಪ್ರಾಧಿಕಾರ ಕೂಡ ಎಲ್‌ಐಸಿಯಲ್ಲಿ ಹೂಡಿಕೆ ಮಾಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.